

ವಾಷಿಂಗ್ಟನ್: ಅಮೆರಿಕಾಗೆ ಇಂಜಿನಿಯರ್ ಗಳು ಹಾಗೂ ವಿಜ್ಞಾನಿಗಳನ್ನು ರಫ್ತು ಮಾಡುವುದರಲ್ಲಿ ಭಾರತ ಏಶ್ಯಾದಲ್ಲೇ ಮುಂಚೂಣಿ ರಾಷ್ಟ್ರವಾಗಿ ಮುಂದುವರೆದಿದೆ.
ಭಾರತದ ಇಂಜಿನಿಯರ್ ಗಳು ಹಾಗು ವಿಜ್ಞಾನಿಗಳು ಅಮೆರಿಕಾಗೆ ತೆರಳಿ ಭವಿಷ್ಯ ರೂಪಿಸಿಕೊಳ್ಳುವ ಟ್ರೆಂಡ್ ಮುಂದುವರೆದಿದ್ದು ಏಷ್ಯಾ ಖಂಡದ 2 .96 ಮಿಲಿಯನ್ ಇಂಜಿನಿಯರ್ ಗಳು ಹಾಗೂ ವಿಜ್ಞಾನಿಗಳ ಪೈಕಿ 950,000 ಇಂಜಿನಿಯರ್ ಗಳು ಹಾಗೂ ವಿಜ್ಞಾನಿಗಳು ಭಾರತದಿಂದ ವಲಸೆ ಹೋದವರಾಗಿದ್ದಾರೆ ಎಂದು ಇತ್ತೀಚಿನ ವರದಿಯೊಂದು ಹೇಳಿದೆ.
2003 ರಿಂದ 2013 ವರೆಗೆ ಅಮೆರಿಕದಲ್ಲಿ ನೆಲೆಸಿರುವ ಇಂಜಿನಿಯರ್ ಗಳು ಹಾಗೂ ವಿಜ್ಞಾನಿಗಳ ಸಂಖ್ಯೆ 21 .6 ಮಿಲಿಯನ್ ನಿಂದ 29 ಮಿಲಿಯನ್ ಗೆ ಏರಿಕೆಯಾಗಿದೆ. ಅಮೆರಿಕಾಗೆ ವಲಸೆಬಂದಿರುವ ವಿಜ್ಞಾನಿಗಳು ಹಾಗೂ ಇಂಜಿನಿಯರ್ ಗಳ ಪೈಕಿ ಶೇ.57 ರಷ್ಟು ಮಂದಿ ಏಷ್ಯಾದವರಾಗಿದ್ದು ಈ ಪೈಕಿ ಭಾರತಿಯರೇ ಅತಿ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಇನ್ನು ಯೂರೋಪ್ ನಿಂದ ಶೇ.16 ರಷ್ಟು ಜನರು, ಆಫ್ರಿಕಾ ಸಂಜಾತರು ಶೇ.6 ರಷ್ಟಿದ್ದಾರೆ ಎಂದು ವರದಿ ತಿಳಿಸಿದೆ.