ಭಾರತೀಯ ಅಮೆರಿಕನ್ನರಿಂದ ಅಧ್ಯಕ್ಷೀಯ ಚುನಾವಣೆ ಅಭ್ಯರ್ಥಿ ಡೊಲಾಲ್ಡ್ ಟ್ರಂಪ್ ಗೆ ಬೆಂಬಲ

ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ರಿಪಬ್ಲಿಕನ್ ಅಭ್ಯರ್ಥಿ ಡೊಲಾಲ್ಡ್ ಟ್ರಂಪ್ ಅವರನ್ನು ಅಲ್ಲಿನ ಅನಿವಾಸಿ ಭಾರತೀಯರು ಅಮೆರಿಕದ ಭರವಸೆ ಎಂದು ಹೇಳಿದೆ.
ಡೊಲಾಲ್ಡ್ ಟ್ರಂಪ್
ಡೊಲಾಲ್ಡ್ ಟ್ರಂಪ್

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿರುವ ರಿಪಬ್ಲಿಕನ್ ಅಭ್ಯರ್ಥಿ ಡೊಲಾಲ್ಡ್ ಟ್ರಂಪ್ ಅವರನ್ನು ಅಲ್ಲಿನ ಅನಿವಾಸಿ ಭಾರತೀಯರು ಅಮೆರಿಕದ ಭರವಸೆ ಎಂದು ಹೇಳಿದ್ದು, ಡೊನಾಲ್ಡ್ ಅವರನ್ನು ಬೆಂಬಲಿಸಲು ಸಂಘಟನೆಯೊಂದನ್ನು ಪ್ರಾರಂಭಿಸಿದ್ದಾರೆ.

ನ್ಯೂಯಾರ್ಕ್ ನ  ಟ್ರೈಸ್ಟೇಟ್ ನಲ್ಲಿ ಅಮೆರಿಕದ ಭಾರತೀಯರು ಪೊಲಿಟಿಕಲ್ ಆಕ್ಷನ್ ಸಮಿತಿ(ಪಿಎಸಿ) ಯನ್ನು ಪ್ರಾರಂಭಿಸಿದ್ದು, ಡೊನಾಲ್ಡ್ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಸೆಟಾನ್ ಹಾಲ್ ವಿಶ್ವವಿದ್ಯಾಲಯದ ಬ್ಯುಸಿನೆಸ್ ವಿಭಾಗದ ಪ್ರಾಧ್ಯಾಪಕರಾಗಿರುವ ಡಾ.ಎ.ಡಿ ಅಮರ್ ಈ ಸಮಿತಿಯನ್ನು ಪ್ರಾರಂಭಿಸಿದ್ದು, ಫೆಡರಲ್ ಚುನಾವಣಾ ಆಯೋಗದಲ್ಲಿ ಇಂಡಿಯನ್ ಅಮೆರಿಕನ್ಸ್ ಫಾರ್ ಟ್ರಂಪ್ -2016 ನ್ನು ಕಳೆದ ವಾರ ನೋಂದಣಿ ಮಾಡಿದ್ದಾರೆ.

ಟ್ರಂಪ್ ಅವರನ್ನು ಅಮೆರಿಕದ ಅಧ್ಯಕ್ಷೀಯ ಹುದ್ದೆಗೆ ಆಯ್ಕೆ ಮಾಡಲು ಅಮೆರಿಕನ್ನರ, ಪ್ರಮುಖವಾಗಿ ಭಾರತೀಯ ಅಮೆರಿಕನ್ನರ ಬೆಂಬಲ ಪಡೆಯುವುದು ಈ ಸಮಿತಿಯ ಮುಖ್ಯ ಉದ್ದೇಶವಾಗಿದೆ ಎಂದು ಪಿಎಸಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X

Advertisement

X
Kannada Prabha
www.kannadaprabha.com