ಢಾಕಾ ಉಗ್ರ ದಾಳಿ: ಕುರಾನ್ ಓದಲಿಲ್ಲ ಎಂದು ಕತ್ತು ಸೀಳಿದರು!

ಬಾಂಗ್ಲಾದೇಶ ರಾಜಧಾನಿ ಢಾಕಾದ ರೆಸ್ಟೋರೆಂಟ್ ಮೇಲೆ ದಾಳಿ ಮಾಡಿ ನಾಗರಿಕರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದ ಇಸಿಸ್ ಉಗ್ರರು ಕುರಾನ್ ಓದಲಿಲ್ಲ ಎಂಬ ಒಂದೇ ಕಾರಣಕ್ಕಾಗಿ ಬರೊಬ್ಬರಿ 20 ಮಂದಿ ಒತ್ತೆಯಾಳುಗಳ ಕತ್ತು ಸೀಳಿ ಕೊಂದಿದ್ದಾರೆ ಎಂದು ತಿಳಿದುಬಂದಿದೆ...
ಢಾಕಾ ಉಗ್ರ ದಾಳಿ ಪ್ರಕರಣ (ಸಂಗ್ರಹ ಚಿತ್ರ)
ಢಾಕಾ ಉಗ್ರ ದಾಳಿ ಪ್ರಕರಣ (ಸಂಗ್ರಹ ಚಿತ್ರ)
Updated on: 

ಢಾಕಾ: ಬಾಂಗ್ಲಾದೇಶ ರಾಜಧಾನಿ ಢಾಕಾದ ರೆಸ್ಟೋರೆಂಟ್ ಮೇಲೆ ದಾಳಿ ಮಾಡಿ ನಾಗರಿಕರನ್ನು ಒತ್ತೆಯಾಳುಗಳಾಗಿ ಇಟ್ಟುಕೊಂಡಿದ್ದ ಇಸಿಸ್ ಉಗ್ರರು ಕುರಾನ್ ಓದಲಿಲ್ಲ ಎಂಬ ಒಂದೇ  ಕಾರಣಕ್ಕಾಗಿ ಬರೊಬ್ಬರಿ 20 ಮಂದಿ ಒತ್ತೆಯಾಳುಗಳ ಕತ್ತು ಸೀಳಿ ಕೊಂದಿದ್ದಾರೆ ಎಂದು ತಿಳಿದುಬಂದಿದೆ.

ಢಾಕಾದ ಹೋಲಿ ಆರ್ಟಿಸನ್‌ ಬೇಕರಿ ರೆಸ್ಟೋರೆಂಟ್‌ನಲ್ಲಿ ಸತತ 10 ಗಂಟೆಗಳ ಕಾಲ ಉಗ್ರರ ವಶದಲ್ಲಿದ್ದು, ಸೈನಿಕ ಕಾರ್ಯಾಚರಣೆ ಮೂಲಕ ಅಪಾಯದಿಂದ ಪಾರಾಗಿ ಬಂದ ಪ್ರತ್ಯಕ್ಷ  ದರ್ಶಿಗಳು ತಮ್ಮ ಅನುಭವವನ್ನು ಮಾಧ್ಯಮಗಳೊಂದಿಗೆ ಹಂಚಿಕೊಂಡಿದ್ದು, ರೆಸ್ಟೋರೆಂಟ್ ನಲ್ಲಿದ್ದ ಗ್ರಾಹಕರನ್ನು ಮುಸ್ಲಿಂರು ಮತ್ತು ಮುಸ್ಲಿಮೇತರರು ಎಂದು ಗುರುತಿಸಲು ಉಗ್ರರು ಅವರು  ಕೈಗೆ ಕುರಾನ್ ನೀಡಿ ಓದಲು ಹೇಳಿದ್ದರಂತೆ. ಈ ಪೈಕಿ ಕುರಾನ್ ನಲ್ಲಿನ ಒಂದೆರಡು ಸಾಲುಗಳನ್ನು ಓದಿದ ಮಂದಿಯನ್ನು ಮತ್ತು ಓದದೇ ಇರುವ ಮಂದಿಯನ್ನು ಪ್ರತ್ಯೇಕಿಸಿದ್ದರಂತೆ.

ಬಳಿಕ ಕುರಾನ್ ಓದದೇ ಇದ್ದವರನ್ನು ಮುಸ್ಲಿಮೇತರರು ಎಂದು ಭಾವಿಸಿ ಅವರ ಕತ್ತನ್ನು ಉಗ್ರರು ಚಾಕುವಿನಿಂದ ಸೀಳಿದರು ಎಂದು ಪ್ರತ್ಯದರ್ಶಿಗಳು ಹೇಳಿದ್ದಾರೆ. "ಅವರು ಬಾಂಗ್ಲಾದೇಶಿ  ಪ್ರಜೆಗಳ ಜತೆ ಒರಟಾಗಿ ವರ್ತಿಸಲಿಲ್ಲ. ಬದಲಾಗಿ ಎಲ್ಲ ಬಾಂಗ್ಲಾದೇಶಿಗಳಿಗೂ ರಾತ್ರಿ ಊಟವನ್ನು ಒದಗಿಸಿದ್ದರು. ಬಂದೂಕುಧಾರಿಗಳು ಕುರಾನ್‌ನ ಸಾಲುಗಳನ್ನು ಪಠಿಸುವಂತೆ ಆಗ್ರಹಿಸುವ  ಮೂಲಕ ಅಲ್ಲಿದ್ದವರ ಧರ್ಮವನ್ನು ತಿಳಿದುಕೊಳ್ಳುತ್ತಿದ್ದರು. ಒಂದೆರಡು ಸಾಲು ಪಠಿಸಿದವರು ಮುಸ್ಲಿಮರು ಎಂದು ಖಚಿತವಾದ ಬಳಿಕ ಗುಂಪಿನಿಂದ ಬೇರೆ ಮಾಡುತ್ತಿದ್ದರು. ಆದರೆ ಕುರಾನ್‌  ತಿಳಿಯದವರನ್ನು ಮನಬಂದಂತೆ ಹಿಂಸಿಸುತ್ತಿದ್ದರು’ ಎಂದು ಜನ್ಮದಿನ ಸಮಾರಂಭ ಆಚರಿಸಲು ಆಗಮಿಸಿದ್ದ ಗ್ರಾಹಕರೊಬ್ಬರು ಉಗ್ರರ ಕ್ರೌರ್ಯವನ್ನು ವಿವರಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com