ಕಾಬುಲ್: ಒಂದು ಭಯೋತ್ಪಾದಕ ಸಂಘಟನೆ ಮತ್ತೊಂದು ಭಯೋತ್ಪಾದಕ ಸಂಘಟನೆಗೆ ಸೆಡ್ಡು ಹೊಡೆದಿರುವುದು ಅಫ್ಘಾನಿಸ್ಥಾನದಲ್ಲಿ. ಇಸ್ಲಾಮಿಕ್ ಸ್ಟೇಟ್ ಆಫ್ ಇರಾಕ್ ಮತ್ತು ಸಿರಿಯಾದ (ಐಸಿಸ್) ಬೆಂಬಲಿಗರು ಅಫ್ಘಾನಿಸ್ಥಾನದಲ್ಲಿ ನೆಲೆಯೂರಲು ಪ್ರಯತ್ನಿಸುತ್ತಿರುವ ಹಿನ್ನಲೆಯಲ್ಲಿ ತಾಲಿಬಾನ್ ಭಯೋತ್ಪಾದಕ ಸಂಸ್ಥೆಗೆ ಹಿನ್ನಡೆಯಾಗಿದ್ದು, ಕಳವಳ ವ್ಯಕ್ತಪಡಿಸಿದೆ.