ಬೀಜೀಂಗ್: ಕುಡಿದ ಮತ್ತಿನಲ್ಲಿ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಯುವತಿಯನ್ನು ರಕ್ಷಿಸಲು ಹೋಗಿ ಯುವತಿ ಸೇರಿ ಐವರು ಜಲ ಸಮಾಧಿಯಾಗಿರುವ ಘಟನೆ ವಾಯುವ್ಯ ಚೀನಾದಲ್ಲಿ ನಡೆದಿದೆ.
ನದಿಯ ದಡದಲ್ಲಿ 19 ವರ್ಷದ ಯುವತಿ ತನ್ನ ನಾಲ್ವರು ಸಹೋದ್ಯೋಗಿಗಳ ಜತೆ ಸೇರಿ ಗುಂಡಿನ ಪಾರ್ಟಿ ಮಾಡಿದ್ದು, ಬಳಿಕ ನದಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಈ ವೇಳೆ ಸಹೋದ್ಯೋಗಿಗಳು ಆಕೆಯನ್ನು ರಕ್ಷಿಸಿದ್ದಾರೆ.
ಯುವತಿಯನ್ನು ರಕ್ಷಿಸಿದ ಸಹೋದ್ಯೋಗಿಗಳು ಆಕೆಯನ್ನು ದಡಕ್ಕೆ ತಂದು ಬಿಟ್ಟಿದ್ದಾರೆ. ಇದಾದ ಬಳಿಕ ಯುವತಿ ಮತ್ತೆ ನದಿಗೆ ಹಾರಿದ್ದಾಳೆ. ಈ ಬಾರಿ ವಿಧಿ ತನ್ನ ಕ್ರೂರ ದೃಷ್ಠಿ ಬೀರಿದ್ದು, ಯುವತಿ ಜತೆ ಸಹೋದ್ಯೋಗಿಗಳು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.