ಫ್ಲೊರಿಡಾ ನೈಟ್ ​ಕ್ಲಬ್ ​ನಲ್ಲಿ ಗುಂಡಿನ ದಾಳಿ: 2 ಸಾವು, 14 ಮಂದಿಗೆ ಗಾಯ

ಅಮೆರಿಕಾದ ಪ್ಲೊರಿಡಾದ ನೈಟ್​ಕ್ಲಬ್ ವೊಂದರಲ್ಲಿ ದುಷ್ಕರ್ಮಿಗಳು ಸೋಮವಾರ ಬೆಳಗಿನ ಜಾವ ಗುಂಡಿನ ದಾಳಿ ನಡೆಸಿದ್ದು,...
ನೈಟ್ ಕ್ಲಬ್
ನೈಟ್ ಕ್ಲಬ್
ವಾಷಿಂಗ್ಟನ್: ಅಮೆರಿಕಾದ ಪ್ಲೊರಿಡಾದ ನೈಟ್​ ಕ್ಲಬ್ ವೊಂದರಲ್ಲಿ ದುಷ್ಕರ್ಮಿಗಳು ಸೋಮವಾರ ಬೆಳಗಿನ ಜಾವ ಗುಂಡಿನ ದಾಳಿ ನಡೆಸಿದ್ದು, ದಾಳಿಯಲ್ಲಿ ಕನಿಷ್ಟ ಇಬ್ಬರು ಮೃತಪಟ್ಟಿದ್ದು, 14 ಮಂದಿ ಗಾಯಗೊಂಡಿದ್ದಾರೆ.
ಫೋರ್ಟ್ ಮೇಯರ್ ನೈಟ್ ​ಕ್ಲಬ್ ನಲ್ಲಿ ಗುಂಡಿನ ದಾಳಿ ನಡೆದಿರುವುದನ್ನು ಪೊಲೀಸರು ಖಚಿತಪಡಿಸಿದ್ದಾರೆ. ಹದಿಹರೆಯದವರು ಪಾರ್ಟಿ ಮಾಡುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿದೆ ಎಂದು ಅಮೆರಿಕ ಮಾಧ್ಯಮಗಳು ವರದಿ ಮಾಡಿವೆ.
ಬಂದೂಕುಧಾರಿ ಏಕಾಏಕಿ ಕ್ಲಬ್ ಬಳಿ ಬಂದು ಬಹಿರಂಗವಾಗಿಯೇ ಗುಂಡಿನ ದಾಳಿ ನಡೆಸಿದ್ದು, ಈ ಸಂಬಂಧ ಓರ್ವನನ್ನು ಬಂಧಿಸಿದ್ದು, ಮತ್ತಿಬ್ಬರನ್ನು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಾಹನ ನಿಲುಗಡೆ ಸ್ಥಳದಲ್ಲಿ ಸ್ಥಳೀಯ ಕಾಲಮಾನ 12.30 AM (EST) ಕ್ಕೆ ಗುಂಡಿನ ದಾಳಿ ಕೇಳಿ ಬಂದಿದ್ದು, ಗಾಯಗೊಂಡವರ ಪೈಕಿ ಕೆಲವ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com