ವನ್ಯ ಜೀವಿ ಸಂರಕ್ಷಣೆಗೆ ಅಮೆರಿಕ- ಭಾರತದ ನಡುವೆ ಒಪ್ಪಂದ

ವನ್ಯ ಜೀವಿಗಳ ಸಂರಕ್ಷಣೆ ಗಾಹೂ ಅವುಗಳ ಕಳ್ಳಸಾಗಣೆ ತಡೆಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಹಾಗೂ ಅಮೆರಿಕ ನಡುವೆ ಒಪ್ಪಂದ ನಡೆದಿದೆ.
ವನ್ಯ ಜೀವಿಗಳು (ಸಂಗ್ರಹ ಚಿತ್ರ)
ವನ್ಯ ಜೀವಿಗಳು (ಸಂಗ್ರಹ ಚಿತ್ರ)
Updated on: 

ವಾಷಿಂಗ್ ಟನ್: ವನ್ಯ ಜೀವಿಗಳ ಸಂರಕ್ಷಣೆ ಗಾಹೂ ಅವುಗಳ ಕಳ್ಳಸಾಗಣೆ ತಡೆಗೆ ಸಂಬಂಧಿಸಿದಂತೆ ಭಾರತ ಸರ್ಕಾರ ಹಾಗೂ ಅಮೆರಿಕ ನಡುವೆ ಒಪ್ಪಂದ ನಡೆದಿದೆ.
ಅಮೆರಿಕದಲ್ಲಿರುವ ಭಾರತಿಯ ರಾಯಭಾರಿ ಅರುಣ್ ಕೆ ಸಿಂಗ್, ಹಾಗೂ ಅಮೆರಿಕದ ಆರ್ಥಿಕ ಬೆಳವಣಿಗೆ, ಇಂಧನ ಹಾಗೂ ಪರಿಸರ ಇಲಾಖೆಯ ಅಧೀನ ಕಾರ್ಯದರ್ಶಿ ಕ್ಯಾಥೋರಿನ್ ನೋವಿಲ್ಲೆ ಒಪ್ಪಂದಕ್ಕೆ ಸಹಿ ಹಾಕಿದ್ದು, ಪ್ರಾದೇಶಿಕವಾಗಿ ಹಾಗೂ ಜಾಗತಿಕ ಮಟ್ಟದಲ್ಲಿ ವನ್ಯಜೀವಿಗಳ ಕಳ್ಳಸಾಗಣೆ ತಡೆಗಟ್ಟಲು ಪರಸ್ಪರ ಸಹಕಾರ ನೀಡಲು ಒಪ್ಪಂದ ಮಾಡಿಕೊಳ್ಳಲಾಗಿದೆ.
ವನ್ಯ ಜೀವ ಸಂಕುಲ ನಿರ್ವಹಣೆ ಹಾಗೂ ಕಾನೂನು ಜಾರಿಗೆ ಸಂಬಂಧಿಸಿದ ಬಗ್ಗೆ ಭಾರತ- ಅಮೆರಿಕ ಪರಸ್ಪರ ಕಲಿಯುವುದು ಸಾಕಷ್ಟಿದೆ ಎಂದು ಭಾರತದ ರಾಯಭಾರಿ ಅರುಣ್ ಸಿಂಗ್ ಹೇಳಿದ್ದಾರೆ. ಇನ್ನು ಬೇಟೆಯಾಡುವುದಕ್ಕೂ ಅವಕಾಶ ನಿರಾಕರಿಸುವುದರ ಬಗ್ಗೆಯೂ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಸಿಂಗ್ ಮಾಹಿತಿ ನೀಡಿದ್ದಾರೆ. ಮುಂದಿನ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಪ್ರವಾಸ ಕೈಗೊಳ್ಳುತ್ತಿರುವ ಸಂದರ್ಭದಲ್ಲಿ ಒಪ್ಪಂದ ನಡೆದಿರುವುದು ಮಹತ್ವ ಪಡೆದುಕೊಂಡಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com