ಹೆಲ್ಮೆಟ್ ಧರಿಸದ ಕಾಂಬೋಡಿಯನ್ ಪ್ರಧಾನಿಗೆ ದಂಡ

ಹೆಲ್ಮೆಟ್ ಧರಿಸದೆ ಬೈಕ್ ರೈಡ್ ಮಾಡಿ ಸಂಚಾರಿ ನಿಯಮ ಉಲ್ಲಂಘಿಸಿದ ಕಾಂಬೋಡಿಯಾ ಪ್ರಧಾನಿ ಹುನ್ ಸೇನ್ ಅವರಿಗೆ ಪೊಲೀಸರು ದಂಡ ವಿಧಿಸಿದ್ದಾರೆ....
ಹುನ್ ಸೇನ್
ಹುನ್ ಸೇನ್
ನೋಮ್ ಪೆನ್: ಹೆಲ್ಮೆಟ್ ಧರಿಸದೆ ಬೈಕ್ ರೈಡ್ ಮಾಡಿ ಸಂಚಾರಿ ನಿಯಮ ಉಲ್ಲಂಘಿಸಿದ ಕಾಂಬೋಡಿಯಾ ಪ್ರಧಾನಿ ಹುನ್ ಸೇನ್ ಅವರಿಗೆ ಪೊಲೀಸರು ದಂಡ ವಿಧಿಸಿದ್ದಾರೆ. ಅಲ್ಲದೆ ಈ ಸಂಬಂಧ ಕಾಂಬೋಡಿಯಾ ಪ್ರಧಾನಿ ಸಾರ್ವಜನಿಕವಾಗಿ ಕ್ಷಮೆಯಾಚಿಸಿದ್ದಾರೆ.
ಕೋಹ್ ಕೊಂಗ್ ಪ್ರಾಂತ್ಯದಲ್ಲಿ ಸಂಚಾರಿಯ ನಿಯಮ ಉಲ್ಲಂಘಿಸಿದ ಹುನ್ ಸೇನ್ ಗೆ ಕಾಂಬೋಡಿಯಾ ಪೊಲೀಸರು 15,000 ರಿಯೆಲ್(3.75) ದಂಡ ವಿಧಿಸಿದ್ದಾರೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಜೂನ್ 18ರಂದು ಹುನ್ ಸೇನ್ ಅವರು ನೋಮ್ ಪೆನ್ ನಿಂದ ಕೋಹ್ ಕೊಂಗ್ ಗೆ ಕಾರಿನಲ್ಲಿ ತೆರಳುತ್ತಿದ್ದರು. ಈ ವೇಳೆ ರಸ್ತೆ ಬದಿ ಕಾರು ನಿಲ್ಲಿಸಿ ಫನ್ ಗಾಗಿ ಕೇವಲ 250 ಮೀಟರ್ ಹೆಲ್ಮೆಟ್ ಧರಿಸದೇ ಬೈಕ್ ರೈಡ್ ಮಾಡಿದ್ದರು.
ಈ ಬಗ್ಗೆ ಫೇಸ್ ಬುಕ್ ನಲ್ಲಿ ಪ್ರತಿಕ್ರಿಯಿಸಿರುವ ಹುನ್ ಸೇನ್, ತಾವು ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕಾಗಿ ದಂಡ ಕಟ್ಟುವುದಾಗಿ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com