30 ಮಂದಿ ಭಾರತೀಯ ಮೀನುಗಾರರ ಬಂಧಿಸಿದ ಪಾಕಿಸ್ತಾನ

ಗುಜರಾತ್ ಮೇಲೆ ಉಗ್ರರು ದಾಳಿ ನಡೆಸುವ ಕುರಿತು ಮಾಹಿತಿ ನೀಡಿದ ಬೆನ್ನಲ್ಲೇ ಪಾಕಿಸ್ತಾನ ಕರಾವಳಿ ಪಡೆ ಗುಜರಾತ್ ಕರಾವಳಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಸುಮಾರು 30 ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಿದೆ...
ಪಾಕಿಸ್ತಾನ ಕರಾವಳಿ ಯೋಧರು (ಸಂಗ್ರಹ ಚಿತ್ರ)
ಪಾಕಿಸ್ತಾನ ಕರಾವಳಿ ಯೋಧರು (ಸಂಗ್ರಹ ಚಿತ್ರ)
Updated on: 

ನವದೆಹಲಿ: ಗುಜರಾತ್ ಮೇಲೆ ಉಗ್ರರು ದಾಳಿ ನಡೆಸುವ ಕುರಿತು ಮಾಹಿತಿ ನೀಡಿದ ಬೆನ್ನಲ್ಲೇ ಪಾಕಿಸ್ತಾನ ಕರಾವಳಿ ಪಡೆ ಗುಜರಾತ್ ಕರಾವಳಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಸುಮಾರು 30  ಮಂದಿ ಭಾರತೀಯ ಮೀನುಗಾರರನ್ನು ಬಂಧಿಸಿದೆ.

ಪಾಕಿಸ್ತಾನ ಕರಾವಳಿ ಭದ್ರತಾ ಪಡೆಯ ಯೋಧರು ಗುಜರಾತ್ ನ ಓಖಾ ಮತ್ತು ಪೋರ್ ಬಂದರ್ ನಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಒಟ್ಟು 5 ಬೋಟ್ ಗಳನ್ನು ವಶಕ್ಕೆ ಪಡೆದಿದ್ದು, ಒಟ್ಟು 30  ಮಂದಿಯನ್ನು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಅಂತಾರಾಷ್ಟ್ರೀಯ ಸಮುದ್ರ ಗಡಿ ಜಖಾವ್ ಕರಾವಳಿ ಪ್ರದೇಶದಲ್ಲಿ ಪಾಕಿಸ್ತಾನ ಈ ಕಾರ್ಯಾಚರಣೆ ಮಾಡಿದೆ.

ಕಳೆದ ಆಕ್ಟೋಬರ್ ನಿಂದ ಈ ವರೆಗೂ ಪಾಕಿಸ್ತಾನ ಕರಾವಳಿ ಭದ್ರತಾ ಪಡೆಯ ಯೋಧರು ಸುಮಾರು 57 ಮೀನುಗಾರಿಕಾ ಬೋಟ್ ಗಳನ್ನು ವಶಪಡಿಸಿಕೊಂಡಿದ್ದು, ಸುಮಾರು 340 ಮಂದಿ  ಮೀನುಗಾರರನ್ನು ಬಂಧಿಸಿದೆ. ನಿನ್ನೆಯಷ್ಟೇ ಪಾಕಿಸ್ತಾನ ಭದ್ರಾತ ಸಲಹೆಗಾರ ಸರ್ತಾಜ್ ಎಜಾಜ್ ಅವರು, ಭಾರತದ ಭದ್ರತಾ ಸಲಹೆಗಾರ ಅಜಿತ್ ಧೋವಲ್ ಅವರಿಗೆ ಉಗ್ರ ದಾಳಿ ಕುರಿತ  ಮಾಹಿತಿ ನೀಡಿದ್ದರು. ಮಾಹಿತಿ ದೊರೆತ ಬೆನ್ನಲ್ಲೇ ಗುಜರಾತ್, ಮಧ್ಯಪ್ರದೇಶ ಮತ್ತು ಉತ್ತರ ಪ್ರದೇಶದಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದೆ.

ಇಂದು ಮಹಾಶಿವರಾತ್ರಿ ಹಬ್ಬವಿದ್ದು, ಶಿವನ ದೇವಾಲಯಗಳಲ್ಲಿ ಅಪಾರ ಭಕ್ತರು ಸೇರುವುದರಿಂದ ಉಗ್ರರು ಇದನ್ನೇ ಅಸ್ತ್ರ ಮಾಡಿಕೊಂಡು ದಾಳಿ ನಡೆಸುವ ಸಾಧ್ಯತೆ ಇದೆ. ಹೀಗಾಗಿ  ದೇಶಾದ್ಯಂತ ವಿರುವ ಎಲ್ಲ ಪ್ರಮುಖ ಶಿವ ದೇವಾಲಯಗಳಿಗೆ ಕಲ್ಪಿಸಲಾಗಿರುವ ಭದ್ರತೆಯನ್ನು ಇಮ್ಮಡಿಗೊಳಿಸಲಾಗಿದೆ. ಮುಖ್ಯವಾಗಿ ಗುಜರಾತ್ ನಲ್ಲಿರುವ ಸೋಮನಾಥ ದೇವಾಲಯಕ್ಕೆ  ಹೆಚ್ಚುವರಿ ಭದ್ರತೆ ಒದಗಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com