ಉತ್ತರ ಚೀನಾದಲ್ಲಿ ಕಲ್ಲಿದ್ದಲು ಗಣಿ ಕುಸಿತ: 19 ಸಾವು

ಕಲ್ಲಿದ್ದಲು ಗಣಿಯೊಂದು ದಿಢೀರ್ ಕುಸಿದ ಪರಿಣಾಮ 19 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಚೀನಾ ಶಾಂಕ್ಷಿ ಪ್ರಾಂತದಲ್ಲಿ ನಡೆದಿದೆ...
ಕಲ್ಲಿದ್ದಲು ಗಣಿ
ಕಲ್ಲಿದ್ದಲು ಗಣಿ

ಬೀಜಿಂಗ್: ಕಲ್ಲಿದ್ದಲು ಗಣಿಯೊಂದು ದಿಢೀರ್ ಕುಸಿದ ಪರಿಣಾಮ 19 ಮಂದಿ ಸಾವನ್ನಪ್ಪಿರುವ ಘಟನೆ ಉತ್ತರ ಚೀನಾ ಶಾಂಕ್ಷಿ ಪ್ರಾಂತದಲ್ಲಿ ನಡೆದಿದೆ.

ಶಾನ್ಯಿನ್ ಕೌಂಟಿಯಲ್ಲಿನ ಆನ್​ಪಿಂಗ್ ಕಲ್ಲಿದ್ದಲು ಗಣಿ ಕಂಪೆನಿಗೆ ಸೇರಿದ ಕಲ್ಲಿದ್ದಲು ಗಣಿಯಲ್ಲಿ ರಾತ್ರಿ 10.10ರ ವೇಳಗೆ ಸಂಭವಿಸಿದ್ದು, ಘಟನೆಯಲ್ಲಿ 19 ಮಂದಿ ಸಾವನ್ನಪ್ಪಿದ್ದು, 110 ಮಂದಿ ಅಪಾಯದಿಂದ ಪಾರಾಗಿದ್ದಾರೆ ಎಂದು ಗಣಿ ಮಾಲೀಕರು ಗುರುವಾರ ತಿಳಿಸಿದ್ದಾರೆ.

ಭೂಗರ್ಭ ಗಣಿಯಲ್ಲಿ ಒಟ್ಟು 129 ಮಂದಿ ಗಣಿ ಕಾರ್ಮಿಕರು ದುರಂತದ ವೇಳೆಯಲ್ಲಿ ಕಾರ್ಯ ನಿರತರಾಗಿದ್ದರು. ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ ಎಂದು ವರದಿ ತಿಳಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com