ಜಿ ಫಾರ್ ಗನ್, ಟಿ ಫಾರ್ ಟ್ಯಾಂಕ್: ಉಗ್ರ ಪಾಠಕ್ಕೆ ಮಕ್ಕಳ ಆಪ್ ಸೃಷ್ಟಿಸಿದ ಐಎಸ್ಐಎಸ್

ಐಎಸ್ಐಎಸ್ ಉಗ್ರರು ಇದೇ ಮೊದಲ ಬಾರಿಗೆ ಮಕ್ಕಳಿಗೆ ಉಗ್ರ ಪಾಠ ಹೇಳಿಕೊಡಲು ಆಪ್ ವೊಂದನ್ನು ಅಭಿವೃದ್ಧಿಪಡಿಸಿದ್ದು,...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on
ವಾಷಿಂಗ್ಟನ್: ಐಎಸ್ಐಎಸ್ ಉಗ್ರರು ಇದೇ ಮೊದಲ ಬಾರಿಗೆ ಮಕ್ಕಳಿಗೆ ಉಗ್ರ ಪಾಠ ಹೇಳಿಕೊಡಲು ಆಪ್ ವೊಂದನ್ನು ಅಭಿವೃದ್ಧಿಪಡಿಸಿದ್ದು, ಅದರಲ್ಲಿ ಎ ಫಾರ್ ಆಪಲ್, ಬಿ ಫಾರ್ ಬಾಲ್ ಎಂದು ಹೇಳಿಕೊಡುವ ಬದಲು ಜಿ ಫಾರ್ ಗನ್, ಟಿ ಫಾರ್ ಟ್ಯಾಂಕ್ ಹಾಗೂ ಆರ್ ಫಾರ್ ರಾಕೇಟ್ ಎಂದು ಹೇಳಿದೆ.
ಆಂಡ್ರಾಯ್ಡ್ ಮೊಬೈಲ್ ಗಳಲ್ಲಿ ಅರೇಬಿಕ್ ಅಕ್ಷರ ಹೇಳಿಕೊಡುವ ಈ ಆಪ್ ಅನ್ನು ಇಸ್ಲಾಮಿಕ್ ಸ್ಟೇಟ್ ಟೆಲಿಗ್ರಾಮ್ ಚಾನೆಲ್ ಮೂಲಕ ಬಿಡುಗಡೆಗೊಳಿಸಲಾಗಿದೆ ಎಂದು ಲಾಂಗ್ ವಾರ್ ಜರ್ನಲ್ ವರದಿ ಮಾಡಿದೆ.
ಮಕ್ಕಳು ಅರೇಬಿಕ್ ಅಕ್ಷರಗಳನ್ನು ಸುಲಭವಾಗಿ ನೆನಪಿಟ್ಟುಕೊಳ್ಳಲು ಇಸ್ಲಾಮಿಕ್ ಹಾಡುಗಳನ್ನು ಈ ಆಪ್ ನಲ್ಲಿ ಸೇರಿಸಲಾಗಿದೆ. ಜಿ ಎಂದರೆ ಗನ್, ಟಿ ಎಂದರೆ ಟ್ಯಾಂಕ್ ಹಾಗೂ ಆರ್ ಎಂದರೆ ರಾಕೇಟ್ ನಂತಹ ಪದಗಳನ್ನು ಈ ಅಪ್ಲಿಕೇಷನ್ ನಲ್ಲಿ ಕಲಿಸಬಹುದಾಗಿದೆ. ಅಲ್ಲದೆ ಇಂಥ ಪದಗಳು ಹಾಗೂ ಚಿತ್ರಗಳಿಗೆ ಗಾಢ ಬಣ್ಣವನ್ನು ನೀಡಲಾಗಿದೆ.
ಮಗು ತಾಯಿಯ ಗರ್ಭದಲ್ಲಿರುವಾಗಲೇ ಉಗ್ರವಾದದ ಪಾಠ ಹೇಳಿಕೊಡುವ ಐಎಸ್ಐಎಸ್ ಇದೀಗ ಮಕ್ಕಳಿಗಾಗಿಯೇ ಆಪ್ ವೊಂದನ್ನು ಬಿಡುಗಡೆ ಮಾಡಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com