ವಲಸಿಗರ ಗಡಿಪಾರು: ಡೊನಾಲ್ಡ್ ಟ್ರಂಪ್ ನೀತಿ ವಿರೋಧಿಸಿ ವಿದ್ಯಾರ್ಥಿಗಳ ಪ್ರತಿಭಟನೆ

ತಾವು ಅಧ್ಯಕ್ಷರಾಗಿ ಆಯ್ಕೆಯಾದರೇ ಅಮೆರಿಕಾದಲ್ಲಿರುವ ವಲಸಿಗರನ್ನು ಗಡಿಪಾರು ಮಾಡುತ್ತೇನೆ ಎಂದು ಹೇಳಿದ್ದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ...
ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್

ಅಮೆರಿಕ: ತಾವು ಅಧ್ಯಕ್ಷರಾಗಿ ಆಯ್ಕೆಯಾದರೇ ಅಮೆರಿಕಾದಲ್ಲಿರುವ ವಲಸಿಗರನ್ನು ಗಡಿಪಾರು ಮಾಡುತ್ತೇನೆ ಎಂದು ಹೇಳಿದ್ದ ನಿಯೋಜಿತ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ನಿಲುವನ್ನು ಖಂಡಿಸಿ, ಅಮೆರಿಕಾದ ಹಲವು ಕಾಲೇಜುಗಳ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.

ಸ್ಯಾಂಕ್ಚುರಿ ಕ್ಯಾಂಪಸ್ ನಲ್ಲಿ ಸುಮಾರು 80 ಕಾಲೇಜುಗಳಿಂದ 600 ವಿದ್ಯಾರ್ಥಿಗಳು ಸೇರಿ ರ್ಯಾಲಿಯಲ್ಲಿ ಪಾಲ್ಗೊಂಡರು.  

ಶಾಲೆಗಳು ವಲಸಿಗರ ಯಾವುದೇ ವಯಕ್ತಿಕ ಮಾಹಿತಿಯನ್ನು ಅಧಿಕಾರಿಗಳ ಜೊತೆ ಹಂಚಿಕೊಳ್ಳುವುದಿಲ್ಲ ಎಂಬ ಭರವಸೆ ನೀಡಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದರು.

ಅಧಿಕಾರಿಗಳು ಕಾಲೇಜ್ ಕ್ಯಾಂಪಸ್ ಗೆ ಬಂದು ವಲಸಿಗರ ಬಗ್ಗೆ ವಿಚಾರಣೆ ನಡೆಸಿದರೇ ಆಗುವ ಭಯದ ಬಗ್ಗೆ ನಿಮಗೆ ಅರಿವಿದೆಯೇ? ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.

ಅಮೆರಿಕಾ ಅಧ್ಯಕ್ಷೀಯ ಚುನಾವಣಾ ಪ್ರಚಾರದ ವೇಳೆ ದೇಶದಲ್ಲಿರುವ ಲಕ್ಷಾಂತರ ವಲಸಿಗರನ್ನು ಗಡಿಪಾರು ಮಾಡುವುದಾಗಿ ರಿಪಬ್ಲಿಕನ್ ಪಕ್ಷ ಭರವಸೆ ನೀಡಿತ್ತು. ಅದರಂತೆ ಈಗ ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಆಯ್ಕೆಯಾಗಿರುವುದು ವಲಸಿಗರಲ್ಲಿ ಆತಂಕ ಸಷ್ಟಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com