ವಿದೇಶ

ಇಸಿಸ್ ಮುಖ್ಯಸ್ಥ ಅಬು ಬಕ್ರ್ ಅಲ್ ಬಾಗ್ದಾದಿ ಊಟದಲ್ಲಿ ವಿಷ ಹಾಕಿ ಹತ್ಯೆಗೆ ಯತ್ನ!

ವಿಶ್ವ ಕುಖ್ಯಾತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಅಬು ಬಕ್ರ್ ಅಲ್ ಬಾಗ್ದಾದಿಯನ್ನು ಕೊಲೆಗೈಯ್ಯಲು ಯತ್ನಿಸಲಾಗಿದ್ದು, ಆತನ ಊಟಕ್ಕೆ ವಿಷ ಬೆರೆಸಿ ಕೊಲ್ಲಲು ಯತ್ನಿಸಲಾಗಿದೆ ಎಂದು ತಿಳಿದುಬಂದಿದೆ.

ಇಸಿಸ್ ಮುಖ್ಯಸ್ಥ ಅಬು ಬಕ್ರ್ ಅಲ್ ಬಾಗ್ದಾದಿ ಊಟದಲ್ಲಿ ವಿಷ ಹಾಕಿ ಹತ್ಯೆಗೆ ಯತ್ನ!
ಇಸಿಸ್ ಮುಖ್ಯಸ್ಥ ಬಾಗ್ದಾದಿ (ಸಂಗ್ರಹ ಚಿತ್ರ)
Published On :

ಬಾಗ್ದಾದ್: ವಿಶ್ವ ಕುಖ್ಯಾತ ಉಗ್ರ ಸಂಘಟನೆ ಇಸ್ಲಾಮಿಕ್ ಸ್ಟೇಟ್ ಉಗ್ರಗಾಮಿ ಸಂಘಟನೆ ಮುಖ್ಯಸ್ಥ ಅಬು ಬಕ್ರ್ ಅಲ್ ಬಾಗ್ದಾದಿಯನ್ನು ಕೊಲೆಗೈಯ್ಯಲು ಯತ್ನಿಸಲಾಗಿದ್ದು, ಆತನ ಊಟಕ್ಕೆ ವಿಷ  ಬೆರೆಸಿ ಕೊಲ್ಲಲು ಯತ್ನಿಸಲಾಗಿದೆ ಎಂದು ತಿಳಿದುಬಂದಿದೆ.

ಅಂತಾರಾಷ್ಟ್ರೀಯ ಗುಪ್ತಚರ ಮೂಲಗಳ ಮಾಹಿತಿ ಪ್ರಕಾರ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯಲ್ಲಿರುವ ಬಾಗ್ದಾದಿ ಆಪ್ತರೇ ಆತನ ಊಟಕ್ಕೆ ವಿಷ ಬೆರೆಸಿ ನೀಡಿದ್ದು, ಪ್ರಸ್ತುತ ಬಾಗ್ದಾದಿ ಸ್ಥಿತಿ  ಗಂಭೀರವಾಗಿದೆ. ಬಾಗ್ದಾದಿಯನ್ನು ಇಸಿಸ್ ಉಗ್ರ ಕಪಿಮುಷ್ಠಿಯಲ್ಲಿರುವ ನೈನ್ ವೇ ಪ್ರಾಂತ್ಯದಲ್ಲಿರುವ ಬೀಅಜ್ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ ಎಂದು  ತಿಳಿದುಬಂದಿದೆ.

ಇನ್ನು ಬಾಗ್ದಾದಿಗೆ ವಿಷ ಹಾಕಿದ ವ್ಯಕ್ತಿ ಯಾರು ಎಂಬ ವಿಚಾರ ತಿಳಿಯದೇ ತಲೆಕೆಡಿಸಿಕೊಂಡಿರುವ ಇಸ್ಲಾಮಿಕ್ ಸ್ಟೇಟ್ ಉಗ್ರ ಸಂಘಟನೆಯ ಮುಖ್ಯಸ್ಥರು ಇದೀಗ ಸಂಘಟನೆ ಶಂಕಿತ ವ್ಯಕ್ತಿಗಳ  ಬಂಧನದಲ್ಲಿ ತೊಡಗಿದ್ದಾರಂತೆ. ಬಂಧಿತರ ಪೈಕಿ ಮೂವರು ವ್ಯಕ್ತಿಗಳು ಸೇರಿ ಬಾಗ್ದಾದಿಗೆ ವಿಷ ಹಾಕಿದ್ದಾರೆ ಎಂದು ತಿಳಿದುಬಂದಿದ್ದು, ಮೂವರನ್ನು ತೀವ್ರ ವಿಚಾರಣೆಗೊಳಪಡಿಸಲಾಗಿದೆಯಂತೆ.

ಇನ್ನು ಇತ್ತೀಚೆಗಷ್ಟೇ ಅಮೆರಿಕದ ಚಾಲಕ ರಹಿತ ಯುದ್ಧ ವಿಮಾನ ಡ್ರೋನ್ ದಾಳಿಯಲ್ಲಿ ಬಾಗ್ದಾದಿ ಸಾವನ್ನಪ್ಪಿದ್ದ ಎಂದು ಹೇಳಲಾಗುತ್ತಿತ್ತು. ಆದರೆ ಇದೀಗ ಹೊಸ ವರದಿಗಳ ಪ್ರಕಾರ ಬಾಗ್ದಾದಿ  ಬದುಕಿದ್ದು, ತನ್ನ ಆಪ್ತರಿಂದಲೇ ಇದೀಗ ಮೃತ್ಯುಕೂಪಕ್ಕೆ ತಳ್ಳಲ್ಪಟ್ಟಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.