

ಇಸ್ಲಾಮಾಬಾದ್: ದ್ವಿಪಕ್ಷೀಯ ಮಾತುಕತೆ ನಡೆಸುವ ಪಾಕಿಸ್ತಾನದ ಪ್ರತಿಯೊಂದು ಪ್ರಯತ್ನವನ್ನು ಭಾರತ ಕಡೆಗಣಿಸುತ್ತಿದೆ ಎಂದು ಅಮೆರಿಕದಲ್ಲಿರುವ ಪಾಕಿಸ್ತಾನ ರಾಯಭಾರಿ ಜಲೀಲ್ ಅಬ್ಬಾಸ್ ಜಿಲಾನಿ ಆರೋಪಿಸಿದ್ದಾರೆ.
ವಿಶ್ವ ವ್ಯವಹಾರಗಳ ಪರಿಷತ್ ನಲ್ಲಿ ಭಾಗವಹಿಸಿ ಮಾತನಾಡಿರುವ ಪಾಕಿಸ್ತಾನದ ರಾಯಭಾರಿ ಕಾಶ್ಮೀರ ವಿಷಯವನ್ನು ಪ್ರಸ್ತಾಪಿಸಿದ್ದು, ಅಂತಾರಾಷ್ಟ್ರೀಯ ಸಮುದಾಯ ಕಾಶ್ಮೀರ ವಿವಾದವನ್ನು ಬಗೆಹರಿಸಲು ನೆರವು ನೀಡಬೇಕೆಂದು ಮನವಿ ಮಾಡಿದ್ದಾರೆ. ಇದೆ ವೇಳೆ ಭಾರತದೊಂದಿಗಿನ ದ್ವಿಪಕ್ಷೀಯ ಮಾತುಕತೆ ಬಗ್ಗೆಯೂ ಮಾತನಾಡಿರುವ ಜಲೀಲ್ ಅಬ್ಬಾಸ್ ಜಿಲಾನಿ, ದ್ವಿಪಕ್ಷೀಯ ಮಾತುಕತೆಗೆ ಪಾಕಿಸ್ತಾನ ಯತ್ನಿಸುತ್ತಿದ್ದರು ಪಾಕ್ ಯತ್ನವನ್ನು ಭಾರತ ಕಡೆಗಣಿಸುತ್ತಿದೆ ಎಂದು ಜಲೀಲ್ ಅಬ್ಬಾಸ್ ಜಿಲಾನಿ ಆರೋಪಿಸಿದ್ದಾರೆ.
ಪಾಕಿಸ್ತಾನ ಸಾರ್ಕ್ ಶೃಂಗಸಭೆಯನ್ನು ನಡೆಸಲು ಯತ್ನಿಸಿದ್ದನ್ನು ಸಹ ಭಾರತ ವಿಫಲಗೊಳಿಸಿದೆ, ಬಗೆಹರಿಯದೇ ಉಳಿದಿರುವ ವಿವಾದಗಳನ್ನು ಬಗೆಹರಿಸಿಕೊಳ್ಳದೇ ಪ್ರಾದೇಶಿಕ ಶಾಂತಿ ನೆಲೆಸಲು ಸಾಧ್ಯವಿಲ್ಲ ಎಂದು ಪಾಕ್ ರಾಯಭಾರಿ ಅಭಿಪ್ರಾಯಪಟ್ಟಿದ್ದಾರೆ.