ಈಬೇ ಸೈಟ್ ನಲ್ಲಿ ಪತ್ನಿಯನ್ನೇ ಮಾರಾಟಕ್ಕಿಟ್ಟ ಪತಿ!

ಪತ್ನಿಯ ಅನುಕಂಪವಿಲ್ಲದ ವರ್ತನೆಯಿಂದ ಬೇಸತ್ತ ಪತಿಯೊಬ್ಬ ಆಕೆಯನ್ನು ಈಬೇ ಸೈಟ್ ನಲ್ಲಿ ಮಾರಾಟಕ್ಕಿಟ್ಟ ಘಟನೆ ಲಂಡನ್ ನಲ್ಲಿ ನಡೆದಿದೆ.
ಈಬೇ
ಈಬೇ
Updated on

ಲಂಡನ್: ಪತ್ನಿಯ ಅನುಕಂಪವಿಲ್ಲದ ವರ್ತನೆಯಿಂದ ಬೇಸತ್ತ ಪತಿಯೊಬ್ಬ ಆಕೆಯನ್ನು ಈಬೇ ಸೈಟ್ ನಲ್ಲಿ ಮಾರಾಟಕ್ಕಿಟ್ಟ ಘಟನೆ ಲಂಡನ್ ನಲ್ಲಿ ನಡೆದಿದೆ.

ಟೆಲಿಕಾಂ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸುತ್ತಿರುವ ಸಿಮೋನ್ ಒಕಾನೆ ಎಂಬ ವ್ಯಕ್ತಿ ತನ್ನ ಆರೋಗ್ಯ ಸರಿ ಇಲ್ಲದಿದ್ದರೂ ಪತ್ನಿ ಕಾಳಜಿ ವಹಿಸಲಿಲ್ಲ ಎಂಬ ಅಸಮಾಧಾನಕ್ಕೆ ಬಳಕೆ ಮಾಡಿದ ಕಾರುಗಳ ಪಟ್ಟಿಯಲ್ಲಿ ತನ್ನ ಹೆಂಡತಿಯನ್ನು ಮಾರಾಟಕ್ಕೆ ಇಟ್ಟಿದ್ದ. ಅಚ್ಚರಿಯೆನೆಂದರೆ ಮಾರಾಟಕ್ಕಿಟ್ಟ ಆತನ ಪತ್ನಿ ಲಿಯಾಂಡ್ರಾ ಗೆ 66,000 ಪೌಂಡ್ ಗಳಷ್ಟು ಮೊತ್ತವನ್ನು ಬಿಡ್ ಮಾಡಲಾಗಿತ್ತು!.

ಕಚೇರಿಯಿಂದ ಮನೆಗೆ ಆಗಮಿಸಿದ ಬೆನ್ನಲ್ಲೇ ಸಿಮೋನ್ ತನಗೆ ಆರೋಗ್ಯ ಸರಿ ಇಲ್ಲ ಎಂದಿದ್ದಾನೆ. ಆದರೆ ಇದಕ್ಕೆ ಕಿಂಚಿತ್ತೂ ತಲೆಕೆಡಿಸಿಕೊಳ್ಳದ ಆತನ ಪತ್ನಿ ತಾನು ಸಹ ದಣಿದಿರುವುದಾಗಿ ತಿಳಿಸಿದ್ದಾಳೆ. ಇದರಿಂದ ಅಸಮಾಧಾನಗೊಂಡ ಸಿಮೋನ್, ತಕ್ಷಣವೇ ಆಕೆಯನ್ನು ಆನ್ ಲೈನ್ ಮಾರಾಟ ಜಾಲ ತಾಣ ಈಬೇ ನಲ್ಲಿ ಮಾರಾಟಕ್ಕಿದ್ದಾನೆ.  
ಆಕೆಯ ಬಗ್ಗೆ ನೀಡಿದ್ದ ವಿವರಗಳಲ್ಲಿ ಬಳಕೆ ಮಾಡಿದ ಪತ್ನಿ ಎಂದು ನಮೂದಿಸಿರುವ ಸಿಮೋನ್, ಆಕೆಯನ್ನು ಖರೀದಿಸುವವರು ಯಾರಾದರೂ ಇರಲಿ ದೇವರೇ ಎಂದು ಪ್ರಾರ್ಥಿಸಿದ್ದಾನೆ. ಲಿಯಾಂಡ್ರಾ ಅಡುಗೆ ಮನೆಯ ಕೆಲಸಗಳನ್ನು ಮಾಡುವ ಕೌಶಲ್ಯವಿದೆ. ಕೆಲವೊಮ್ಮೆ ಈ ಕೌಶಲ್ಯಗಳು ನಿಮ್ಮನ್ನು ಆಸ್ಪತ್ರೆಗೆ ಹೋಗುವಂತೆಯೂ ಮಾಡಬಹುದು ಎಂದು ವಿವರಣೆ ನೀಡಿದ್ದಾನೆ.

ತನ್ನನ್ನು ಮಾರಾಟಕ್ಕಿಟ್ಟಿರುವ ವಿಷಯ ತಿಳಿಯುತ್ತಿದ್ದಂತೆಯೇ ಲಿಯಾಂಡ್ರಾಗೆ ಪತಿಯನ್ನು ಕೊಲ್ಲಬೇಕು ಎನಿಸಿತ್ತಂತೆ. ಆದರೆ ಈ ಬಗ್ಗೆ ಸ್ಪಷ್ಟನೆ ನೀಡಿರುವ ಸಿಮೋನ್ ತಮಾಷೆಗಾಗಿ ಈ ರೀತಿ ಮಾಡಿದ್ದಾಗಿ ಹೇಳಿದ್ದಾನೆ. ಅಷ್ಟೇ ಅಲ್ಲದೆ ಈಬೇ ಏನಾದರೂ ತನ್ನ ಜಾಹಿರಾತನ್ನು ಸೈಟ್  ತೆಗೆದುಹಾಕದೇ ಇದ್ದಿದ್ದರೆ, ಪತ್ನಿಯನ್ನು ಖರೀದಿಸಲು ಮತ್ತಷ್ಟು ಬಿಡ್ ಮಾಡುತ್ತಿದ್ದರು ಎಂದೂ ಕಾಲೆಳೆದಿದ್ದಾನೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com