ಚೀನಾದ ಜಗತ್ತಿನ ಅತಿ ದೊಡ್ಡ ಉಭಯಚರ ವಿಮಾನದ ಚೊಚ್ಚಲ ಹಾರಾಟ ಯಶಸ್ವಿ

ಚೀನಾ ವಿಮಾನಯಾನ ಕ್ಷೇತ್ರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾದ ನೆಲ-ಜಲ ಎರಡರ ಮೇಲೂ ಲ್ಯಾಂಡಿಂಗ್, ಟೇಕ್ ಆಫ್ ಆಗುವ ಸಾಮರ್ಥ್ಯದ ವಿಶೇಷ ವಿಮಾನ ತಯಾರಿಕೆ ಯಶಸ್ವಿಯಾಗಿದ್ದು, ಈ ಉಭಯಚರ ವಿಮಾನವನ್ನು ಭಾನುವಾರ ಯಶಸ್ವಿಯಾಗಿ ಚಲಾಯಿಸಲಾಯಿತು.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
Updated on: 
ಬೀಜಿಂಗ್: ಚೀನಾ ವಿಮಾನಯಾನ ಕ್ಷೇತ್ರದ ಅತ್ಯಂತ ಮಹತ್ವಾಕಾಂಕ್ಷಿ ಯೋಜನೆಯಾದ ನೆಲ-ಜಲ ಎರಡರ ಮೇಲೂ ಲ್ಯಾಂಡಿಂಗ್, ಟೇಕ್ ಆಫ್ ಆಗುವ ಸಾಮರ್ಥ್ಯದ ವಿಶೇಷ ವಿಮಾನ ತಯಾರಿಕೆ ಯಶಸ್ವಿಯಾಗಿದ್ದು, ಈ  ಉಭಯಚರ ವಿಮಾನವನ್ನು ಭಾನುವಾರ ಯಶಸ್ವಿಯಾಗಿ ಚಲಾಯಿಸಲಾಯಿತು.
ನೆಲ, ಜಲಗಳೆರಡರಲ್ಲೂ ಹಾರಾಟ ಮಾಡಬಲ್ಲ ಜಗತ್ತಿನ ಅತಿ ದೊಡ್ಡ ಉಭಯಚರ ವಿಮಾನವೆಂಬ ದಾಖಲೆಗೆ ಪಾತ್ರವಾಗಿರುವ ಚೀನಾದ ಸ್ವದೇಶಿ ನಿರ್ಮಿತ ಎಜಿ600, ಭಾನುವಾರ ತನ್ನ ಚೊಚ್ಚಲ ಹಾರಾಟವನ್ನು ಯಶಸ್ವಿಯಾಗಿ  ನಡೆಸಿದೆ. ಈ ವಿಶೇಷ ವಿಮಾನಕ್ಕೆ "ಕುನ್‌ಲೊಂಗ್" ಎಂಬ ಸಂಕೇತನಾಮ ನೀಡಲಾಗಿದ್ದು, ಈ ವಿಮಾನವನ್ನು ದಕ್ಷಿಣದ ಝುಹಾಯಿ ನಗರದಿಂದ ಯಶಸ್ವಿಯಾಗಿ ಹಾರಾಟ ಮಾಡಲಾಯಿತು. ಸುಮಾರು ಒಂದು ಗಂಟೆಯ ಹಾರಾಟದ  ಬಳಿಕ  ವಿಮಾನವು ಭೂಸ್ಪರ್ಶ ಮಾಡಿದೆ. 
ಈ ಉಭಯಚರ ವಿಭಾಗದ ಅತ್ಯಂತ ದೊಡ್ಡ ವಿಮಾನ ಎಂಬ ಕೀರ್ತಿಗೆ ಭಾಜನವಾಗಿರುವ ಕುನ್ ಲೊಂಗ್, 127 ಅಡಿ ರೆಕ್ಕೆಯನ್ನು ಹೊಂದಿದ್ದು, ನಾಲ್ಕು ಟರ್ಬೊಪ್ರೊಪ್ ಎಂಜಿನ್‌ಗಳನ್ನು ಅಳವಡಿಸಿಕೊಂಡಿದೆ. ಈ ವಿಶೇಷ  ವಿಮಾನದಲ್ಲಿ ಒಟ್ಟು 50 ಮಂದಿ ಪ್ರಯಾಣಿಕರು ಪ್ರಯಾಣಿಸ ಬಹುದಾಗಿದೆ. ಅಂತೆಯೇ ಸುಮಾರು 12 ತಾಸುಗಳ ಕಾಲ ಅದು ಗಗನದಲ್ಲಿ ಹಾರಾಡಬಲ್ಲದು ಎಂದು ಎಂದು ಸುದ್ದಿಸಂಸ್ಥೆ ವರದಿ ಮಾಡಿದೆ.
ಈ ವಿಮಾನ ಹಾರಾಟ ಯಶಸ್ವಿಯಾದ ಬೆನ್ನಲ್ಲೇ ಮಾತನಾಡಿದ ಎಜಿ600 ವಿಮಾನದ ಮುಖ್ಯವಿನ್ಯಾಸಕಾರ ಹುವಾಂಗ್ ಲಿಂಗ್ಸಾಯಿ ಅವರು, "ಈ ಯಶಸ್ವಿ ಚೊಚ್ಚಲ ಹಾರಾಟದೊಂದಿಗೆ ಚೀನಾವು ಬೃಹತ್ ಉಭಯಚರ  ವಿಮಾನವನ್ನು ಅಭಿವೃದ್ಧಿಪಡಿಸುವ ಸಾಮರ್ಥ್ಯವಿರುವ ಜಗತ್ತಿನ ಕೆಲವೇ ರಾಷ್ಟ್ರಗಳ ಸಾಲಿಗೆ ಸೇರ್ಪಡೆಗೊಂಡಿದೆ’’ಎಂದು ಹೇಳಿದ್ದಾರೆ. 
ಈ ಉಭಯಚರ ವಿಮಾನದಲ್ಲಿ ಸೇನಾ ಉಪಕರಣಗಳಿದ್ದು, ಅದನ್ನು ಅಗ್ನಿಶಾಮಕ ಹಾಗೂ ನೌಕಾ ರಕ್ಷಣೆ ಕಾರ್ಯಾಚರಣೆಗಳಲ್ಲಿ ಬಳಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಈ ವಿಮಾನದ 4500 ಕಿ.ಮೀ.ವರೆಗಿನ  ಕಾರ್ಯಾಚರಣೆ ಸಾಮರ್ಥ್ಯ ಹೊಂದಿದ್ದು, ಅದನ್ನು ಚೀನಾದ ಕೃತಕ ದ್ವೀಪಗಳಲ್ಲಿ ನಿಯೋಜಿಸಲು ಯೋಗ್ಯವಾಗುವಂತೆ ನಿರ್ಮಾಣ ಮಾಲಾಗಿದೆ ಎಂದು ಸಿಂಗಾಪುರದ ನಾನ್ಯಾಂಗ್ ತಾಂತ್ರಿಕ ವಿವಿಯ ಸೇನಾ ವಿಶ್ಲೇಷಕ ಜೇಮ್ಸ್  ಚಾರ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com