"ಪಶ್ತೂನ್ ಮಹಿಳೆಯರನ್ನು ಲೈಂಗಿಕ ಗುಲಾಮರನ್ನಾಗಿಸಿಕೊಂಡಿರುವ ಪಾಕ್ ಸೇನೆ"!

ಪ್ರಮುಖ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನಿ ಸೈನಿಕರು ಪಶ್ತೂನ್ ಮಹಿಳೆಯರನ್ನು ಲೈಂಗಿಕ ಗುಲಾಮರನ್ನಾಗಿಸಿಕೊಂಡಿದ್ದಾರೆ ಎಂದು ಪ್ರತ್ಯೇಕತಾವಾದಿ ಮುಖಂಡ ಉಮರ್ ದೌದ್ ಖಟ್ಟಕ್ ಗಂಭೀರ ಆರೋಪ ಮಾಡಿದ್ದಾರೆ.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
Updated on: 

ಇಸ್ಲಾಮಾಬಾದ್: ಪ್ರಮುಖ ಬೆಳವಣಿಗೆಯೊಂದರಲ್ಲಿ ಪಾಕಿಸ್ತಾನಿ ಸೈನಿಕರು ಪಶ್ತೂನ್ ಮಹಿಳೆಯರನ್ನು ಲೈಂಗಿಕ ಗುಲಾಮರನ್ನಾಗಿಸಿಕೊಂಡಿದ್ದಾರೆ ಎಂದು ಪ್ರತ್ಯೇಕತಾವಾದಿ ಮುಖಂಡ ಉಮರ್ ದೌದ್ ಖಟ್ಟಕ್ ಗಂಭೀರ ಆರೋಪ ಮಾಡಿದ್ದಾರೆ.

ಖಾಸಗಿ ಸುದ್ದಿಸಂಸ್ಥೆಗೆ ಈ ಬಗ್ಗೆ ಸಂದರ್ಶನ ನೀಡಿರುವ ಉಮರ್ ದೌದ್ ಖಟ್ಟಕ್ ಅವರು, ಪಾಕಿಸ್ತಾನ ಸೇನೆ ತಮ್ಮ ಪಶ್ತೂನ್ ಮಹಿಳೆಯರನ್ನು ಲೈಂಗಿಕ ಗುಲಾಮರಂತೆ ಕಾಣುತ್ತಿದೆ. ಪ್ರತೀ ಭಾರಿ ವಜೀರಿಸ್ತಾನ ಮತ್ತು ಸ್ವಾಟ್  ಕಣಿವೆಯಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಹೆಸರಲ್ಲಿ ಸ್ಥಳೀಯ ಯುವತಿಯರನ್ನು ಅಪಹರಿಸುತ್ತಿದ್ದಾರೆ. ಈ ವಿವಾದತ ಪ್ರದೇಶದಲ್ಲಿ ಪಾಕ್ ಸೈನಿಕರು ಬಹುದೊಡ್ಡ ಪ್ರಮಾಣದಲ್ಲಿ ಮಾನವಹಕ್ಕು ಉಲ್ಲಂಘನೆ ಮಾಡುತ್ತಿದ್ದಾರೆ.  ಅಪಹರಣಕ್ಕೀಡಾದ ಮಹಿಳೆಯರನ್ನು ತಮ್ಮ ಲೈಂಗಿಕ ಗುಲಾಮರನ್ನಾಗಿ ಮಾಡಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.

ಹೀಗೆ ಅಪರಹಣವಾದ ಯುವತಿಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಬಳಿಕ ಅವರನ್ನು ಪಾಕಿಸ್ತಾನದ ವಿವಿದ ಜಿಲ್ಲೆಗಳಲ್ಲಿನ ಪ್ರಮುಖ ವೇಶ್ಯಾವಾಟಿಕೆ ಅಡ್ಡಿಗಳಿಗೆ ನೀಡುತ್ತಿದ್ದಾರೆ. ಇಂದಿಗೂ ಲಾಹೋರ್ ನ ವೇಶ್ಯಾವಾಟಿಕೆ  ಅಡ್ಡೆಗಳಲ್ಲಿ ನಮ್ಮ ಪಶ್ತೂನ್ ಮಹಿಳೆಯರಿರುವುದನ್ನು ನಾನು ನೋಡಿದ್ದೇನೆ. ಪಶ್ತೂನ್ ಮಹಿಳೆಯರನ್ನು ವೇಶ್ಯಾವಾಟಿಕೆ ಕೂಪಕ್ಕೆ ತಳ್ಳಿ ಅದರಿಂದ ಪಾಕಿಸ್ತಾನ ಸೈನಿಕರು ಹಣ ಸಂಪಾದನೆ ಮಾಡುತ್ತಿದ್ದಾರೆ. ವಜೀರಿಸ್ತಾನ ಮತ್ತು ಸ್ವಾತ್  ಕಣಿವೆಯಲ್ಲಿದ್ದ ಸಾಕಷ್ಚು ಹಳ್ಳಿಗಳನ್ನು ಪಾಕಿಸ್ತಾನ ಸೇನೆ ನಾಶ ಮಾಡಿದ್ದು, ಅಲ್ಲಿದ್ದ ನೂರಾರು ಪಶ್ತೂನ್ ಯುವತಿಯರನ್ನು ವೇಶ್ಯಾವಾಟಿಕೆ ಅಡ್ಡೆಗೆ ತಳ್ಳಿದೆ ಎಂದು ಆರೋಪಿಸಿದ್ದಾರೆ.

ಉಮರ್ ದೌದ್ ಖಟ್ಟಕ್ ಅವರ ಆರೋಪಕ್ಕೆ ಸಂಬಂಧಿಸಿದಂತೆ ಈ ವರೆಗೂ ಪಾಕ್ ಸೇನೆ ಯಾವುದೇ ರೀತಿಯ ಪ್ರತಿಕ್ರಿಯೆ ನೀಡಿಲ್ಲ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com