ಪಾಕ್ ಸಂಸತ್ ನಲ್ಲೇ ಸಂಸದೆ ಮೇಲೆ ದೌರ್ಜನ್ಯ, ಕ್ರಮ ಕೈಗೊಳ್ಳದಿದ್ದರೆ ಆತ್ಯಹತ್ಯೆ ಮಾಡಿಕೊಳ್ಳುತ್ತೇನೆ ಎಂದ ಸಂಸದೆ!

ಪಾಕಿಸ್ತಾನ ಸಂಸತ್ ಇತಿಹಾಸದಲ್ಲೇ ದೊಡ್ಡ ಪ್ರಮಾದವೊಂದು ನಡೆದಿದ್ದು, ಮಹಿಳಾ ಸಂಸದೆಯೊಬ್ಬರ ಮೇಲೆ ಸದನದಲ್ಲೇ ದೌರ್ಜನ್ಯ ಮಾಡಿದ್ದಷ್ಟೇ ಅಲ್ಲದೇ ಅವರನ್ನು ರೂಮಿಗೆ ಬರುವಂತೆ ಅಸಭ್ಯವಾಗಿ ಕರೆದಿದ್ದಾರೆ ಎಂದು ಹೇಳಲಾಗುತ್ತಿದೆ.
ಸಿಂದ್ ಪ್ರಾಂತ್ಯದ ಸಂಸದೆ  ನುಸ್ರತ್ ಸಹರ್ ಅಬ್ಬಾಸಿ (ಫೇಸ್ ಬುಕ್ ಚಿತ್ರ)
ಸಿಂದ್ ಪ್ರಾಂತ್ಯದ ಸಂಸದೆ ನುಸ್ರತ್ ಸಹರ್ ಅಬ್ಬಾಸಿ (ಫೇಸ್ ಬುಕ್ ಚಿತ್ರ)
Updated on: 

ಇಸ್ಲಾಮಾಬಾದ್: ಪಾಕಿಸ್ತಾನ ಸಂಸತ್ ಇತಿಹಾಸದಲ್ಲೇ ದೊಡ್ಡ ಪ್ರಮಾದವೊಂದು ನಡೆದಿದ್ದು, ಮಹಿಳಾ ಸಂಸದೆಯೊಬ್ಬರ ಮೇಲೆ ಸದನದಲ್ಲೇ ದೌರ್ಜನ್ಯ ಮಾಡಿದ್ದಷ್ಟೇ ಅಲ್ಲದೇ ಅವರನ್ನು ರೂಮಿಗೆ ಬರುವಂತೆ ಅಸಭ್ಯವಾಗಿ  ಕರೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಸಂಸದೆ ನುಸ್ರತ್ ಸಹರ್ ಅಬ್ಬಾಸಿ ಅವರ ಮೇಲೆ ಪಾಕಿಸ್ತಾನ ಸಚಿವ ಇಮ್ದಾದ್ ಪಿತಾಫಿ ದೌರ್ಜನ್ಯ ನಡೆಸಿದ್ದಷ್ಟೇ ಅಲ್ಲದೇ ತನ್ನ ಕೋಣೆಗೆ ಬರುವಂತೆ ಅಸಭ್ಯವಾಗಿ ಕರೆದಿದ್ದಾರೆ.  ಈ ಬಗ್ಗೆ ಸ್ವತಃ  ಸಂತ್ರಸ್ತ ಸಂಸದೆ ನುಸ್ರತ್ ಸಹರ್ ಅಬ್ಬಾಸಿ ಮಾಧ್ಯಮಗಳ ಮುಂದೆ ತಮ್ಮ ಅಳಲು ತೋಡಿಕೊಂಡಿದ್ದು, ಪಾಕಿಸ್ತಾನದಲ್ಲಿ ಕಾನೂನು ಸುವ್ಯವಸ್ಥೆ ಎಷ್ಟು ಪರಿಣಾಮಕಾರಿಯಾಗಿದೆ ಎಂಬುದಕ್ಕೆ ತಮ್ಮ ಪ್ರಕರಣವೇ ಸ್ಪಷ್ಟ  ನಿದರ್ಶನವಾಗಿದೆ. ಸಂಸದರಾದ ನಮಗೇ ರಕ್ಷಣೆ ಇಲ್ಲ ಎಂದ ಮೇಲೆ ಸಾಮಾನ್ಯ ಪ್ರಜೆಗಳ ಗತಿ ಏನು? ಎಂದು ಅವರು ಕಿಡಿಕಾರಿದ್ದಾರೆ.

"ಪಾಕಿಸ್ತಾನ ಸಂಸತ್ ಸ್ಪೀಕರ್ ಕೂಡ ಓರ್ವ ಮಹಿಳೆಯಾಗಿದ್ದು, ಮತ್ತೊಬ್ಬ ಮಹಿಳೆ ವಿರುದ್ದ ಸದನದಲ್ಲೇ ಆಗುತ್ತಿರುವ ಅನ್ಯಾಯಕ್ಕೆ ಅವರು ಮೂಕ ಪ್ರೇಕ್ಷಕರಾಗಿದ್ದರು. ತಮ್ಮ ಮೇಲೆ ದಾಳಿಯಾಗಿ ಕ್ರಮಕ್ಕೆ ಅವರ ಬಳಿ ಮೊರೆ ಇಟ್ಟರೂ  ಅವರು ಯಾವುದೇ ರೀತಿಯ ಕ್ರಮ ಕೈಗೊಳ್ಳಲಿಲ್ಲ. ಸಚಿವ ಇಮ್ದಾದ್ ಪಿತಾಫಿ ವಿರುದ್ಧ ಸ್ಪೀಕರ್ ಕ್ರಮ ಕೈಗೊಳ್ಳದಿದ್ದರೇ ತಾವು ಸದನದಲ್ಲೇ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಸಾಯುವುದಾಗಿ ನುಸ್ರತ್ ಸಹರ್  ಅಬ್ಬಾಸಿ ಬೆದರಿಕೆ ಹಾಕಿದ್ದಾರೆ.

ಸಚಿವ ಪಿತಾಫಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಟೀಕೆ, ಕ್ಷಮೆ ಯಾಚಿಸಿದ ಸಚಿವ
ಇನ್ನು ಮಹಿಳಾ ಸಂಸದೆಯ ವಿರುದ್ಧ ಆವಾಚ್ಯ ಶಬ್ದಗಳಿಂದ ನಿಂದನೆ ಮಾಡಿದ ಸಚಿವ ಪಿತಾಫಿ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಕೂಡಲೇ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಬೇಕು  ಎಂದು ಆಗ್ರಹ ಮಾಡಲಾಗಿದೆ. ತಮ್ಮ ವಿರುದ್ಧ ವ್ಯಾಪಕ ಟೀಕೆಗಳು ವ್ಯಕ್ತವಾದ ಬೆನ್ನಲ್ಲೇ ಸಚಿವ ಪಿತಾಫಿ ಭೇಷರತ್ ಕ್ಷಮೆ ಯಾಚಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com