ಇದು ನನ್ನ ಎರಡನೇ ಮನೆ, ಇಂಡಿಯಾದಲ್ಲಿ ಮಿಸ್ ಮಾಡಿಕೊಳ್ಳುವಂತದ್ದು ಏನೂ ಇಲ್ಲ: ವಿಜಯ ಮಲ್ಯ

ಭಾರತ ತೊರೆದು ಕಳೆದ ಒಂದು ವರ್ಷದಿಂದ ಬ್ರಿಟನ್ ನಲ್ಲಿರುವ ಉದ್ಯಮಿ ವಿಜಯ್ ಮಲ್ಯ ಫಾರ್ಮುಲಾ ವನ್ ರೇಸ್, ವಿಂಬಲ್ಡನ್ ಟೆನ್ನಿಸ್ ಚ್ಯಾಂಪಿಯನ್ ...
ವಿಜಯ ಮಲ್ಯ
ವಿಜಯ ಮಲ್ಯ
ಸಿಲ್ವರ್ ಸ್ಟೋನ್: ಭಾರತ ತೊರೆದು ಕಳೆದ ಒಂದು ವರ್ಷದಿಂದ ಬ್ರಿಟನ್ ನಲ್ಲಿರುವ ಉದ್ಯಮಿ ವಿಜಯ್ ಮಲ್ಯ  ಫಾರ್ಮುಲಾ ವನ್ ರೇಸ್, ವಿಂಬಲ್ಡನ್ ಟೆನ್ನಿಸ್ ಚ್ಯಾಂಪಿಯನ್ ಶಿಪ್ ಸೇರಿದಂತೆ ಮೋಜು ಮಸ್ತಿಯಲ್ಲಿ ಕಾಲ ಕಳೆಯುತ್ತಿದ್ದಾರೆ.
ಭಾರತವನ್ನು ಮಿಸ್ ಮಾಡಿಕೊಳ್ಳುತ್ತಿದ್ದೀರಾ ಎಂದು ಪತ್ರಕರ್ತರು ಕೇಳಿದ ಪ್ರಶ್ನೆಗೆ ಉತ್ತರಿಸಿರುವ ಮಲ್ಯ ಭಾರತದಲ್ಲಿ ಮಸ್ ಮಾಡಿಕೊಳ್ಳುವಂತದ್ದು ನನಗೆ ಏನು ಇಲ್ಲ ಎಂದು ಹೇಳಿದ್ದಾರೆ.
ನನ್ನ ಹತ್ತಿರದ ಸಂಬಂಧಿಕರೆಲ್ಲ ಬ್ರಿಟನ್ ಮತ್ತು ಅಮೆರಿಕಾದಲ್ಲಿದ್ದಾರೆ. ಹೀಗಾಗಿ ಭಾರತದಲ್ಲಿ ಕೌಟುಂಬಿಕವಾಗಿ ಮಿಸ್ ಮಾಡಿಕೊಳ್ಳುವಂತದ್ದು ಏನೂ ಇಲ್ಲ ಎಂದು 61 ವರ್ಷದ ಮಲ್ಯ ತಿಳಿಸಿದ್ದಾರೆ. ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಈಗಾಗಲೇ ಬ್ರಿಟನ್ ಗೆ ಮನವಿ ಮಾಡಿದೆ. 
ನನ್ನನ್ನು ಭೇಟೆಯಾಡುವ ಕೆಲಸ ನಡೆಯುತ್ತಿದೆ. ನಾನು 1992 ರಿಂದ ಇಲ್ಲಿ ವಾಸವಿದ್ದೇನೆ, ಇದು ನನ್ನ ಎರಡನೇ ಮನೆಯಾಗಿದೆ. ಹೀಗಾಗಿ ನನಗೆ ಭಾವನಾತ್ಮಕವಾಗಿ ಯಾವುದೇ ಏರಿಳಿತ ಗಳಿಲ್ಲ,  ಪ್ರಕರಣ ಇತ್ಯರ್ಥ ವಾಗುವವರೆಗೆ ಮಲ್ಯ ಬ್ರಿಟನ್ ಬಿಟ್ಟು ಬರುವ ಸಾಧ್ಯತೆಯಿಲ್ಲ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com