ಕೋಸ್: ಗ್ರೀಕ್ ನ ಕೋಸ್ ಐಲ್ಯಾಂಡ್ ನಲ್ಲಿ ಸಂಭವಿಸಿದ ಪ್ರಬಲ ಭೂಕಂಪಕ್ಕೆ ಇಬ್ಬರು ಬಲಿಯಾಗಿದ್ದು 100 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
ಶುಕ್ರವಾರ ಬೆಳಗಿನ ಜಾವದ ವೇಳೆ 6.5 ತೀವ್ರತೆಯ ಭೂಕಂಪ ಸಂಭವಿಸಿದೆ. ಭೂಮಿ ನಡುಗಿದ ತೀವ್ರತೆಗೆ ಅನೇಕ ಕಟ್ಟಡಗಳು ಹಾನಿಗೊಂಡಿವೆ.
ಟರ್ಕಿಶ್ ಕರಾವಳಿಯಲ್ಲಿ ರಿಕ್ಟರ್ ಮಾಪಕದಲ್ಲಿ 6.3 ತೀವ್ರತೆಯಲ್ಲಿ ಪ್ರಬಲ ಭೂಕಂಪ ಸಂಭವಿಸಿದ್ದು, ಅದಾದ ನಂತರ ಸುಮಾರು 20 ಬಾರಿ ಭೂಮಿ ಕಂಪಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭೂಕಂಪನದ ಕೇಂದ್ರ ಬಿಂದು ಗ್ರೀಸ್ ಮತ್ತು ಟರ್ಕಿ ನಡುವಿನ ಸಮುದ್ರದಲ್ಲಿ ಕಂಪ ಸಂಭವಿಸಿದೆ. ಎರಡೂ ದೇಶಗಳಲ್ಲಿ ಭೂಕಂಪನದ ಅನುಭವವಾಗಿದ್ದು, ಕಾಸ್ ನಗರಕ್ಕೆ ಹೆಚ್ಚಿನ ಹಾನಿಯಾಗಿದೆ.
ನಗರದಲ್ಲಿ ನ ಹಳೇಯ ಕಟ್ಟಡಗಳಿಗೆ ಹೆಚ್ಚಿನ ಹಾನಿಯಾಗಿದೆ. ಕಟ್ಟಡಗಳೊಳಗೆ ಜನ ಸಿಲುಕಿದ್ದಾರೆಯೇ ಎಂಬ ಅನುಮಾನದಿಂದ ರಕ್ಷಣಾ ಪಡೆ ಮನೆಗಳೊಳಗೆ ಪರಿಶೀಲನೆ ನಡೆಸಿದ್ದಾರೆ. ಸೇನಾಪಡೆ ತುರ್ತು ಸೇವೆಯನ್ನು ಒದಗಿಸಿ, ರಕ್ಷಣಾ ಪರಿಹಾರ ಕಾರ್ಯದಲ್ಲಿ ತೊಡಗಿದೆ.