ಭಾರತದ ಗಡಿಯ ಸಮೀಪ, ಟಿಬೆಟ್ ನ 2 ನೇ ಅತಿ ದೊಡ್ಡ ಏರ್ ಪೋರ್ಟ್ ಟರ್ಮಿನಲ್ ಗೆ ಚೀನಾ ಚಾಲನೆ

ಟಿಬೆಟ್ ನ್ನು ಆಕ್ರಮಿಸಿಕೊಂಡಿರುವ ಆರೋಪ ಎದುರಿಸುತ್ತಿರುವ ಚೀನಾ ಟಿಬೆಟ್ ನಲ್ಲಿ 2 ನೇ ಅತಿ ದೊಡ್ಡ ಏರ್ ಪೋರ್ಟ್ ಟರ್ಮಿನಲ್ ನ ಕಾರ್ಯಾರಂಭ ಮಾಡಿದೆ.
ಭಾರತದ ಗಡಿಯ ಸಮೀಪ, ಟಿಬೆಟ್ ನ 2 ನೇ ಅತಿ ದೊಡ್ಡ ಏರ್ ಪೋರ್ಟ್ ಟರ್ಮಿನಲ್ ಗೆ ಚೀನಾ ಚಾಲನೆ
ಭಾರತದ ಗಡಿಯ ಸಮೀಪ, ಟಿಬೆಟ್ ನ 2 ನೇ ಅತಿ ದೊಡ್ಡ ಏರ್ ಪೋರ್ಟ್ ಟರ್ಮಿನಲ್ ಗೆ ಚೀನಾ ಚಾಲನೆ
Updated on: 
ಬೀಜಿಂಗ್: ಟಿಬೆಟ್ ನ್ನು ಆಕ್ರಮಿಸಿಕೊಂಡಿರುವ ಆರೋಪ ಎದುರಿಸುತ್ತಿರುವ ಚೀನಾ ಟಿಬೆಟ್ ನಲ್ಲಿ 2 ನೇ ಅತಿ ದೊಡ್ಡ ಏರ್ ಪೋರ್ಟ್ ಟರ್ಮಿನಲ್ ನ ಕಾರ್ಯಾರಂಭ ಮಾಡಿದೆ.
2020 ರ ವೇಳೆಗೆ ವಾರ್ಷಿಕವಾಗಿ ಸುಮಾರು 750,000 ಪ್ರಯಾಣಿಕರು ಹಾಗೂ 3,000 ಟನ್ ಗಳಷ್ಟು ಸರಕನ್ನು ನಿರ್ವಸುವ ಸಾಮರ್ಥ್ಯ ಹೊಂದಿರುವ ಈ ಏರ್ ಪೋರ್ಟ್ ಟರ್ಮಿನಲ್ ಅರುಣಾಚಲ ಪ್ರದೇಶದಲ್ಲಿರುವ ಭಾರತದ ಗಡಿಯ ಸಮೀಪವೇ ಈ ಏರ್ ಪೋರ್ಟ್ ಟರ್ಮಿನಲ್ ಕಾರ್ಯನಿರ್ವಹಿಸಲಿದೆ. 
ಟಿಬೆಟ್ ನಲ್ಲಿ ಚೀನಾ ಪ್ರಾರಂಭಿಸಿರುವ 6 ನೇ ಏರ್ ಪೋರ್ಟ್ ಟರ್ಮಿನಲ್ ಇದಾಗಿದ್ದರೂ 2 ನೇ ಅತಿ ದೊಡ್ಡ ಟರ್ಮಿನಲ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಟಿಬೆಟ್ ನಲ್ಲಿ ಚೀನಾ ಹೆಚ್ಚಿಸುತ್ತಿರುವ ರಸ್ತೆ ನಿರ್ಮಾಣ, ರೈಲ್ವೆ ಮಾರ್ಗಗಳ ನಿರ್ಮಾಣ ಹಾಗೂ ವೈಮಾನಿಕ ಮೂಲಭೂತ ಸೌಕರ್ಯಗಳ ಯೋಜನೆ ಚೀನಾದ ಸೇನೆಗೆ ಅತ್ಯಂತ ಸಹಕಾರಿಯಾಗಲಿದ್ದು ಭಾರತದ ಮಟ್ಟಿಗೆ ಆತಂಕಕಾರಿಯಾಗಿದೆ. 
ಟಿಬೆಟ್ ನಲ್ಲಿ ಚೀನಾ ಹೊಸದಾಗಿ ಪ್ರಾರಂಭಿಸಿರುವ ನಿಯೀಂಗ್ಚಿ ಏರ್ ಪೋರ್ಟ್ ಟರ್ಮಿನಲ್ 10,300 ಚದರ ಮೀಟರ್ ವಿಸ್ತೀರ್ಣ ಹೊಂದಿದ್ದು 2020 ರ ವೇಳೆಗೆ ವಾರ್ಷಿಕವಾಗಿ ಸುಮಾರು 750,000 ಪ್ರಯಾಣಿಕರು ಹಾಗೂ 3,000 ಟನ್ ಗಳಷ್ಟು ಸರಕನ್ನು ನಿರ್ವಸುವ ಸಾಮರ್ಥ್ಯದ್ದಾಗಿದೆ ಎಂದು ಚೀನಾದ ಸರ್ಕಾರಿ ಮಾಧ್ಯಮವೊಂದು ವರದಿ ಮಾಡಿದೆ. 
 ನಿಯೀಂಗ್ಚಿ ಏರ್ ಪೋರ್ಟ್ ನಿಂದ ಚೀನಾದ ವಾಯುವ್ಯ ಭಾಗದಲ್ಲಿರುವ ಶಾಂಕ್ಸಿ ಪ್ರಾಂತ್ಯದ ರಾಜಧಾನಿ ಕ್ಸಿಯಾನ್ ಗೆ ಹೊಸ ವಾಯುಯಾನ ಮಾರ್ಗ ಲಭ್ಯವಾಗಲಿದ್ದು, ಪೂರ್ಣ ಪ್ರಮಾಣದಲ್ಲಿ ವಿಮಾನ ನಿಲ್ದಾಣ ಕಾರ್ಯಾರಂಭವಾದ ನಂತರ ಲ್ಹಾಸಾ, ಗುವಾಂಗ್ಝೌ, ಕುನ್ಮಿಂಗ್, ಚಾಂಗಿಂಗ್, ಷೆನ್ಜೆನ್ ಗೆ ಹೆಚ್ಚುವರಿ ವಿಮಾನ ಸೌಲಭ್ಯ ಸಾಧ್ಯವಾಗಲಿದೆ ಎಂದು ಚೀನಾ ಮಾಧ್ಯಮದ ವರದಿಯ ಮೂಲಕ ತಿಳಿದುಬಂದಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com