ಟರ್ಕಿಯಲ್ಲಿ ಸೇನಾ ಹೆಲಿಕಾಪ್ಟರ್ ಪತನ: 13 ಯೋಧರ ಸಾವು

ಟರ್ಕಿಯಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದು, ಪರಿಣಾಮ ಹೆಲಿಕಾಪ್ಟರ್ ನಲ್ಲಿದ್ದ 13 ಯೋಧರು ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಇಸ್ತಾಂಬುಲ್: ಟರ್ಕಿಯಲ್ಲಿ ಸೇನಾ ಹೆಲಿಕಾಪ್ಟರ್ ಪತನಗೊಂಡಿದ್ದು, ಪರಿಣಾಮ ಹೆಲಿಕಾಪ್ಟರ್ ನಲ್ಲಿದ್ದ 13 ಯೋಧರು ಸಾವನ್ನಪ್ಪಿರುವ ಘಟನೆ ಬುಧವಾರ ನಡೆದಿದೆ. 
13 ಯೋಧರಿದ್ದ ಎಎಸ್532 ಕೂಗರ್ ಸೇನಾ ಹೆಲಿಕಾಪ್ಟರ್ ಇರಾಕ್ ಗಡಿ ಪ್ರದೇಶಕ್ಕೆ ತೆರಳುತ್ತಿತ್ತು. ಈ ವೇಳೆ ಹೈ ವೋಲ್ಟೇಜ್ ವಿದ್ಯುತ್ ತಂತಿಗೆ ಡಿಕ್ಕಿ ಹೊಡೆದ ಪರಿಣಾಮ ಹೆಲಿಕಾಪ್ಟರ್ ನಲ್ಲಿ ಬೆಂಕಿ ಕಾಣಿಸಿಕೊಂಡು ಪತನಗೊಂಡಿದೆ. 
ವಿದ್ಯುತ್ ತಂತಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿ ಹೆಲಿಕಾಪ್ಟರ್ ಪತನ ಗೊಂಡಿದೆ ಎಂದು ಟರ್ಕಿ ಸೇನೆ ಹೇಳಿಕೊಂಡಿದೆ. 
ಹೆಲಿಕಾಪ್ಟರ್ ಪತನಗೊಂಡ ಹಿನ್ನಲೆಯಲ್ಲಿ ಟರ್ಕಿ ಸೇನಾಧಿಕಾರಿ ಜನರಲ್ ಹುಲುಸಿ ಅಕಾರ್, ಉಪ ಪ್ರಧಾನಮಂತ್ರಿ ಮೆಹ್ಮೆತ್ ಸಿಮ್ಸೆಕ್, ರಕ್ಷಣಾ ಸಚಿವ ಫಿಕ್ರಿ ಇಸಿಕ್ ಮತ್ತು ಆಂತರಿಕ ಸಚಿವ ಸುಲೇಮಾನ್ ಸೊಯ್ಲು ಅವರು ಘಟನಾ ಸ್ಥಳಕ್ಕೆ ಭೇಟಿ ನೀಡುತ್ತಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com