ನಿನ್ನೆ ಸಾಯಂಕಾಲ ಈಜಿಪ್ಟ್ ನ ಉತ್ತರ ಸಿನೈ, ಬಿರ್-ಅಲ್-ಅಬೆಡ್ ನ ಮಸೀದಿ ಮೇಲೆ ಉಗ್ರಗಾಮಿಗಳು ನಡೆಸಿದ ದಾಳಿಯಲ್ಲಿ 200ಕ್ಕೂ ಅಧಿಕ ಮುಗ್ಧ ನಾಗರಿಕರು ಮೃತಪಟ್ಟಿದ್ದು ಇದೊಂದು ಹೇಯ ಕೃತ್ಯವಾಗಿದೆ. ಈ ಸಂದರ್ಭದಲ್ಲಿ ಭಾತ ಸರ್ಕಾರ ಈಜಿಪ್ಟ್ ಸರ್ಕಾರದ ನೆರವಿಗೆ ನಿಲ್ಲುತ್ತದೆ ಎಂದು ವಿದೇಶಾಂಗ ವ್ಯವಹಾರಗಳ ಇಲಾಖೆ ವಕ್ತಾರ ರವೀಶ್ ಕುಮಾರ್ ಟ್ವೀಟ್ ಮಾಡಿದ್ದಾರೆ.