10 ಮಂದಿ ದರೋಡೆಕೋರರನ್ನು ಗುಂಡಿಟ್ಟು ಕೊಂದ ಬ್ರೆಜಿಲ್ ಪೊಲೀಸರು!

ಬ್ರೆಜಿಲ್ ಪೊಲೀಸರು ಹತ್ತು ಮಂದಿ ಶಂಕಿತ ದರೋಡೆಕೋರರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ...
ಶೂಟ್ ಔಟ್
ಶೂಟ್ ಔಟ್
ಸಾಯೋ ಪೌಲೋ: ಬ್ರೆಜಿಲ್ ಪೊಲೀಸರು ಹತ್ತು ಮಂದಿ ಶಂಕಿತ ದರೋಡೆಕೋರರನ್ನು ಗುಂಡಿಟ್ಟು ಹತ್ಯೆ ಮಾಡಿದ್ದಾರೆ. 
ಸಿರಿವಂತ ನಾಡು ಸಾಯೋ ಪೌಲೋದಲ್ಲಿ 20 ಮಂದಿ ದರೋಡೆಕೋರರು ಭಾನುವಾರ ಸಂಜೆ ಮನೆಗಳಲ್ಲಿ ಕಳ್ಳತನ ಮಾಡುತ್ತಿದ್ದರು. ಈ ವೇಳೆ ಪೊಲೀಸರು ಆಗಮಿಸಿದಾಗ ಶಸ್ತ್ರಾಸ್ತ್ರದಾರಿ ದರೋಡೆಕೋರರು ಪೊಲೀಸರ ಮೇಲೆ ಗುಂಡು ಹಾರಿಸಿದ್ದಾರೆ. ಈ ವೇಳೆ ಬ್ರೆಜಿಲ್ ಪೊಲೀಸರು ನಡೆಸಿದ ಶೂಟ್ ಔಟ್ ನಲ್ಲಿ 10 ಮಂದಿ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 
ಈ ಶೂಟ್ ಔಟ್ ನಲ್ಲಿ ಪೊಲೀಸರು ಗಾಯಗೊಂಡಿರುವ ಬಗ್ಗೆ ಯಾವುದೇ ಮಾಹಿತಿ ವರದಿಯಾಗಿಲ್ಲ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com