ಇಸ್ರೇಲ್ ವಾಯುಪಡೆಯ 'ಸರ್ಜಿಕಲ್ ಸ್ಟ್ರೈಕ್': ಉಗ್ರರ ಶಸ್ತ್ರಾಸ್ತ್ರ ಗೋದಾಮು ನಾಶ!

ಡಮಾಸ್ಕಸ್ ವಿಮಾನ ನಿಲ್ದಾಣದಲ್ಲಿದ್ದ ಲೆಬೆನಾನ್ ಉಗ್ರ ಸಂಘಟನೆ ಹೆಜ್ಬೋಲ್ಲಾದ ಶಸ್ತ್ರಾಸ್ತ್ರ ಗೋದಾಮಿನ ಮೇಲೆ ಇಸ್ರೇಲ್ ವಾಯುಸೇನೆ ಶುಕ್ರವಾರ ರಾಕೆಟ್ ದಾಳಿ ಮಾಡಿದೆ ಎಂದು ತಿಳಿದುಬಂದಿದೆ.
ಉಗ್ರರ ಗೋದಾಮಿನ ಮೇಲೆ ಇಸ್ರೇಲ್ ದಾಳಿ
ಉಗ್ರರ ಗೋದಾಮಿನ ಮೇಲೆ ಇಸ್ರೇಲ್ ದಾಳಿ
ಡಮಾಸ್ಕಸ್: ಡಮಾಸ್ಕಸ್ ವಿಮಾನ ನಿಲ್ದಾಣದಲ್ಲಿದ್ದ ಲೆಬೆನಾನ್ ಉಗ್ರ ಸಂಘಟನೆ ಹೆಜ್ಬೋಲ್ಲಾದ ಶಸ್ತ್ರಾಸ್ತ್ರ ಗೋದಾಮಿನ ಮೇಲೆ ಇಸ್ರೇಲ್ ವಾಯುಸೇನೆ ಶುಕ್ರವಾರ ರಾಕೆಟ್ ದಾಳಿ ಮಾಡಿದೆ ಎಂದು ತಿಳಿದುಬಂದಿದೆ.
ಮೂಲಗಳ ಪ್ರಕಾರ ಸಿರಿಯಾ ಸರ್ಕಾರದ ಬೆಂಬಲವಿರುವ ಲೆಬೆನಾನ್ ಉಗ್ರ ಸಂಘಟನೆ ಹೆಜ್ಬೊಲ್ಲಾ, ಡಮಾಸ್ಕಸ್ ವಿಮಾನ ನಿಲ್ದಾಣದಲ್ಲೇ ತನ್ನ ಶಸ್ತ್ರಾಸ್ತ್ರ ಗೋದಾಮು ನಿರ್ಮಾಣ ಮಾಡಿಕೊಂಡಿತ್ತು. ಈ ಬಗ್ಗೆ ಮಾಹಿತಿ ಪಡೆದ  ಇಸ್ರೇಲ್ ವಾಯುಸೇನೆ ಗೋದಾಮಿನ ಮೇಲೆ ಶುಕ್ರವಾರ ರಾಕೆಟ್ ದಾಳಿ ಮಾಡಿ ಗೋದಾಮನ್ನು ನಾಶ ಪಡಿಸಿದೆ ಎಂದು ತಿಳಿದುಬಂದಿದೆ.

ಈ ಬಗ್ಗೆ ಸಿರಿಯಾದಲ್ಲಿರುವ ಮಾನವ ಹಕ್ಕುಗಳ ವೀಕ್ಷಕ ರಾಮಿ ಅಬ್ದೆಲ್ ರಹಮಾನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ಡಮಾಸ್ಕಸ್ ವಿಮಾನ ನಿಲ್ದಾಣದಲ್ಲಿದ್ದ ಹೆಜ್ಬೋಲ್ಲಾ ಉಗ್ರ ಸಂಘಟನೆಯ ಗೋದಾಮನ್ನು ಇಸ್ರೇಲ್ ಸೇನೆ  ನಾಶಪಡಿಸಿದೆ ಎಂದು ಹೇಳಿದ್ದಾರೆ.

ಇದೇ ವಿಚಾರವಾಗಿ ಟೈಮ್ಸ್ ಆಫ್ ಇಸ್ರೇಲ್ ಪತ್ರಿಕೆ ವರದಿ ಬಿತ್ತರಿಸಿದ್ದು, ಇಸ್ರೇಲ್ ವಾಯುಪಡೆಯ ಮೂರು ಅತ್ಯಾಧುನಿಕ ಜೆಟ್ ವಿಮಾನಗಳು ಡಮಾಸ್ಕಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ದಾಳಿ ಮಾಡಿ ಉಗ್ರರ  ಶಸ್ತ್ರಾಸ್ತ್ರ ಗೋದಾಮನ್ನು ನಾಶಪಡಿಸಿದೆ ಎಂದು ವರದಿ ಮಾಡಿದೆ. ಅಂತೆಯೇ ಇಸ್ರೇಲ್ ಮೇಲೆ ದಾಳಿ ನಡೆಸುವ ಉದ್ದೇಶದಿಂದಲೇ ಇಲ್ಲಿ ಶಸ್ತ್ರಾಸ್ತ್ರ ಶೇಖರಣೆ ನಡೆದಿತ್ತು ಎಂದು ಇಸ್ರೇಲ್ ಆರೋಪಿಸಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com