ತಮ್ಮ ಪ್ರಥಮ ರಾತ್ರಿಯ ಚಿತ್ರೀಕರಣ ಮಾಡಲು ವಿಡಿಯೋಗ್ರಾಫರ್ ಗಾಗಿ ದಂಪತಿಯಿಂದ ಸರ್ಚ್!

ದಾಂಪತ್ಯ ಜೀವನಕ್ಕೆ ಕಾಲಿಡಲು ತುದಿಗಾಲಲ್ಲಿ ನಿಂತಿರುವ ಜೋಡಿಯೊಂದು ತಮ್ಮ ಪ್ರಥಮ ರಾತ್ರಿಯ ಸಿಹಿ ಗಳಿಗೆಯನ್ನು ಮಧುರವಾಗಿಡುವ ಉದ್ದೇಶದಿಂದ ಪ್ರಥಮ ರಾತ್ರಿಯ ಚಿತ್ರೀಕರಣ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಲಂಡನ್: ದಾಂಪತ್ಯ ಜೀವನಕ್ಕೆ ಕಾಲಿಡಲು ತುದಿಗಾಲಲ್ಲಿ ನಿಂತಿರುವ ಜೋಡಿಯೊಂದು ತಮ್ಮ ಪ್ರಥಮ ರಾತ್ರಿಯ ಸಿಹಿ ಗಳಿಗೆಯನ್ನು ಮಧುರವಾಗಿಡುವ ಉದ್ದೇಶದಿಂದ ಪ್ರಥಮ ರಾತ್ರಿಯ ಚಿತ್ರೀಕರಣ ಮಾಡಲು ವಿಡಿಯೋ ಗ್ರಾಫರ್ ಗಾಗಿ ಹುಡುಕಾಟ ನಡೆಸುತ್ತಿದ್ದಾರೆ. 
ಇಂಗ್ಲೆಂಡ್ ನ ಜೋಡಿಯೊಂದು ಸೆಪ್ಟೆಂಬರ್ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ತಮ್ಮ ಮೊದಲ ರಾತ್ರಿಯನ್ನು ಚಿತ್ರೀಕರಿಸಲು ವೃತ್ತಿಪರ ವಿಡಿಯೋ ಗ್ರಾಫರ್ ಬೇಕಾಗಿದ್ದಾರೆ ಅಂತ ಮೂರನೇ ವ್ಯಕ್ತಿಗಾಗಿ ಜಾಹಿರಾತನ್ನು ನೀಡಿದ್ದಾರೆ. 
ಅಪರಿಚಿತ ಜೋಡಿಯೊಂದು ಹೀಗಂತ ಜಾಹಿರಾತು ನೀಡಿದ್ದಾರೆ. ಮಧ್ಯರಾತ್ರಿ 1 ರಿಂದ 3 ಗಂಟೆಯವರೆಗೆ ಮಾತ್ರ ಮೊದಲ ರಾತ್ರಿಯನ್ನು ಚಿತ್ರೀಕರಣ ಮಾಡಬೇಕಿದೆ. ಇದಕ್ಕೆ 2000 ಡಾಲರ್(ಸುಮಾರು 2 ಲಕ್ಷ) ಹಣವನ್ನು ನೀಡುವುದಾಗಿ ಜಾಹಿರಾತಿನಲ್ಲಿ ತಿಳಿಸಿದ್ದಾರೆ. 
ಮೊದಲ ರಾತ್ರಿಯ ಚಿತ್ರೀಕರಣ ಮಾಡುಸುವುದಾಗಿ ಒಪ್ಪಂದ ಮಾಡಿಕೊಂಡಿದ್ದೇನೆ. ಆದರೆ ದುರದೃಷ್ಟವಶಾತ್ ನಮಗೆ ಇನ್ನು ವಿಡಿಯೋ ಗ್ರಾಫರ್ ಸಿಕ್ಕಿಲ್ಲ. ನಮ್ಮಿಂದ ಹುಡುಕಲು ಸಾಧ್ಯವಾಗುತ್ತಿಲ್ಲ. ತುಂಬಾ ಕಡೆ ಸಾಕಷ್ಟು ಸುತ್ತಾಡಿದ್ದೇವೆ. ಆದರೆ ವಿಡಿಯೋ ಗ್ರಾಫರ್ ಸಿಗುತ್ತಿಲ್ಲ ಎಂದು ತಮ್ಮ ಅಳಲನ್ನು ತೊಡಿಕೊಂಡಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com