ವಾಷಿಂಗ್ಟನ್: WWE ಸೂಪರ್ ಸ್ಟಾರ್ ಕೇನ್ ಎಂದೇ ಖ್ಯಾತಿ ಪಡೆದಿರುವ ರೆಸ್ಲಿಂಗ್ ಸ್ಪರ್ಧಿ ಗ್ಲೆನ್ ಜೇಕಬ್ಸ್ ಈಗ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
ಮಾಜಿ ವರ್ಲ್ಡ್ ರೆಸ್ಲಿಂಗ್ ಎಂಟರ್ಟೈನ್ಮೆಂಟ್ (ಡಬ್ಲ್ಯೂಡಬ್ಲ್ಯೂಇ) ಚಾಂಪಿಯನ್ ಕೇನ್ ಅಮೆರಿಕದ ಟೆನ್ನೆಸ್ಸೀ ರಾಜ್ಯದ ನಾಕ್ಸ್ ಕೌಂಟಿಯ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.
WWEನಲ್ಲಿ ಕೇನ್ ಎಂದೇ ಜಪ್ರಿಯರಾಗಿರುವ 51 ವರ್ಷದ ಗ್ಲೇನ್ ಜೇಕಬ್ಸ್ ಅವರು ರಿಪಬ್ಲಿಕನ್ ಪಕ್ಷದಿಂದ ಸ್ಪರ್ಧಿಸಿದ್ದರು. ಡೆಮಾಕ್ರೆಟಿಕ್ ಪಕ್ಷದ ಲಿಂಡಾ ಹನ್ನೆ ಅವರ ವಿರುದ್ಧ 2-1 ಅಂತರದಿಂದ ಜಯಗಳಿಸಿದರು ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.
ಗ್ಲೇನ್ ಜೇಕಬ್ಸ್ ಸೆಪ್ಟೆಂಬರ್ 1 ರಂದು ನೂತನ ಮೇಯರ್ ಆಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ತಿಳಿದು ಬಂದಿದೆ.