ಸಿಪಿಇಸಿಯಿಂದ ಗಿಲ್ಗಿಟ್-ಬಾಲ್ಟಿಸ್ತಾನ ಕಣಿವೆಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ: ವರದಿ

ಚೀನಾ ಮತ್ತು ಪಾಕಿಸ್ತಾನ ಸಹಯೋಗದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಸಿಪಿಇಸಿ ಯೋಜನೆಯ ಕಾಮಗಾರಿಗಳಿಂದಾಗಿ ಗಿಲ್ಗಿಟ್-ಬಾಲ್ಟಿಸ್ತಾನ ಕಣಿವೆಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವರದಿಯೊಂದು ಹೇಳಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಇಸ್ಲಾಮಾಬಾದ್: ಚೀನಾ ಮತ್ತು ಪಾಕಿಸ್ತಾನ ಸಹಯೋಗದಲ್ಲಿ ಪಾಕ್ ಆಕ್ರಮಿತ ಕಾಶ್ಮೀರ ಕಣಿವೆಯಲ್ಲಿ ನಡೆಯುತ್ತಿರುವ ಸಿಪಿಇಸಿ ಯೋಜನೆಯ ಕಾಮಗಾರಿಗಳಿಂದಾಗಿ ಗಿಲ್ಗಿಟ್-ಬಾಲ್ಟಿಸ್ತಾನ ಕಣಿವೆಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ವರದಿಯೊಂದು ಹೇಳಿದೆ.
ಸಿಪಿಇಸಿಯಿಂದಾಗಿ ಗಿಲ್ಗಿಟ್ -ಬಾಲ್ಟಿಸ್ತಾನದಲ್ಲಿರುವ 36 ಗ್ಲೇಸಿಯಲ್ ಲೇಕ್ಸ್ ನ ವಿವಿಧ ಭಾಗದ ನೀರ್ಗಲ್ಲುಗಳು ಕರಗುತ್ತಿದ್ದು, ಇದರಿಂದ ಸ್ಥಳೀಯ ನಿವಾಸಿಗಳಿಗೆ ಅಪಾಯ ಕಟ್ಟಿಟ್ಟ ಬುತ್ತಿ. ಅಲ್ಲದೆ ಇಡೀ ಗುಡ್ಡದ ಬುಡವೇ ದುರ್ಬಲವಾಗುತ್ತಿದ್ದು, ಪರಿಸ್ಥಿತಿ ಹೀಗೆಯೇ ಮುಂದುವರೆದರೆ ಭವಿಷ್ಯದಲ್ಲಿ ಈ ಗುಡ್ಡ ಪ್ರದೇಶಗಳು ಕುಸಿಯುತ್ತವೆ ಎಂದು ವರದಿಯಲ್ಲಿ ಹೇಳಲಾಗಿದೆ. ಪಾಕಿಸ್ತಾನ ಮೂಲದ ಪರಿಸರ ಸಂಘಟನೆಯೊಂದು ಈ ಸಂಶೋಧನೆ ಮಾಡಿ ವರದಿ ನೀಡಿದ್ದು, ಸಿಪಿಇಸಿ ಯೋಜನೆಯಿಂದಾಗಿ ಗಿಲ್ಗಿಟ್-ಬಾಲ್ಟಿಸ್ತಾನದ 36 ಗ್ಲೇಸಿಯಲ್ ಪ್ರದೇಶಗಳು ಅಪಾಯ ಪ್ರದೇಶಗಳೆಂದು ಘೋಷಿಸಲ್ಪಟ್ಟಿವೆ.
ಇನ್ನು ಭಾರತದ ವಿರೋಧದ ನಡುವೆಯೇ ಚೀನಾ ದೇಶ ಪಾಕಿಸ್ತಾನದ ಸಹಭಾಗಿತ್ವದೊಂದಿಗೆ ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಸಿಪಿಇಸಿ ಯೋಜನೆಯಡಿಯಲ್ಲಿ ವಿವಿಧ ಕಾಮಗಾರಿ ಆರಂಭಿಸಿತ್ತು. ರಸ್ತೆ,. ರೈಲು ಮಾರ್ಗ, ಬಂದರು ನಿರ್ಮಾಣ ಸೇರಿದಂತೆ ವಿವಿಧ ಕಾಮಗಾರಿಗಳನ್ನು ಚೀನಾ ಹಮ್ಮಿಕೊಂಡಿದ್ದು, ಇದು ರಕ್ಷಣಾತ್ಮಕವಾಗಿ ಮಾತ್ರವಲ್ಲಗೇ ನೈಸರ್ಗಿಕವಾಗಿಯೂ ಭಾರತಕ್ಕೆ ದೊಡ್ಡ ಅಪಾಯವನ್ನು ತಂದೊಡ್ಡಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com