ಚೀನಾ: ಫ್ರೆಶ್​ ಗಾಳಿಗಾಗಿ ವಿಮಾನದ ತುರ್ತು ಬಾಗಿಲನ್ನೇ ತೆರೆದ ಪ್ರಯಾಣಿಕ

ಪ್ರಯಾಣಿಕನೊಬ್ಬ ವಿಮಾನ ಟೇಕ್​ ಆಫ್​ ಆಗುವ ಮೊದಲೇ ಫ್ರೆಶ್​ ಗಾಳಿಗಾಗಿ ತುರ್ತು ಬಾಗಿಲನ್ನು ತೆಗೆದು...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೀಜಿಂಗ್: ಪ್ರಯಾಣಿಕನೊಬ್ಬ ವಿಮಾನ ಟೇಕ್​ ಆಫ್​ ಆಗುವ ಮೊದಲೇ ಫ್ರೆಶ್​ ಗಾಳಿಗಾಗಿ ತುರ್ತು ಬಾಗಿಲನ್ನು ತೆಗೆದು ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ಚೀನಾದಲ್ಲಿ ನಡೆದಿದೆ.
ವಿಮಾನದ ತುರ್ತು ಬಾಗಿಲು ತೆರೆದ ಪ್ರಯಾಣಿಕನನ್ನು ಚೆನ್​(25) ಎಂದು ಗುರುತಿಸಲಾಗಿದ್ದು, ಚೀನಾದ ಸಿಚುವಾನ್ ನೈಋತ್ಯ ಪ್ರಾಂತ್ಯದ ಮಿಯಾನ್ಯಾಂಗ್ ವಿಮಾನ ನಿಲ್ದಾಣದಲ್ಲಿ ಸೋಮವಾರ ಈ ಘಟನೆ ನಡೆದಿದೆ.
ಚೆನ್ ನನ್ನು ಪೊಲೀಸರು 15 ದಿನಗಳ ಕಾಲ ವಶಕ್ಕೆ ಪಡೆದಿದ್ದು, 11,000 ಡಾಲರ್​ ದಂಡವನ್ನು ವಿಧಿಸುವ ಸಾಧ್ಯತೆ ಇದೆ ಎನ್ನಲಾಗಿದೆ.
ಪ್ರಯಾಣಿಕ ಬಾಗಿಲು ತೆರೆದಿದ್ದನ್ನು ಗಮನಿಸಿದ ಅಧಿಕಾರಿವರ್ಗ ಮುಂದೆ ಸಂಭವಿಸಲಿದ್ದ ಭಾರಿ ಅಪಘಾತವನ್ನು ತಡೆದಿದ್ದಾರೆ.
ವಿಮಾನದಲ್ಲಿದ್ದ ಹ್ಯಾಂಡಲ್​ ತುರ್ತು ಬಾಗಿಲಿನ ಒಂದು ಭಾಗವಾಗಿತ್ತು ಎಂಬುದು ನನ್ನ ಅರಿವಿಗೆ ಬಂದಿರಲಿಲ್ಲ. ವಿಮಾನದಲ್ಲಿ ಉಸಿರುಗಟ್ಟುವ ಅನುಭವ ಆಗಿದ್ದರಿಂದ ತಾಜಾ ಗಾಳಿಗಾಗಿ ಹ್ಯಾಂಡಲ್​ ಎಳೆದೆ. ತಕ್ಷಣ ಬಾಗಿಲು ತೆರೆದಿದ್ದರಿಂದ ನಾನು ಕೂಡ ಗಾಬರಿಗೊಂಡೆ ಎಂದು ಪ್ರಯಾಣಿಕ ಪೊಲೀಸರಿಗೆ ತಿಳಿಸಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com