ವಿದೇಶ

ಪಾಕ್ ಜೊತೆ ರಕ್ಷಣಾ ಸಹಕಾರ ವೃದ್ಧಿಗೆ ಮುಂದಾದ ಚೀನಾ: ಭಾರತದೊಂದಿಗಿನ ವಿವಾದದಲ್ಲಿ ಪಾಕ್ ಪರ ನಿಂತ ನೆರೆ ರಾಷ್ಟ್ರ!

ಪಾಕ್ ಜೊತೆ ರಕ್ಷಣಾ ಸಹಕಾರ ವೃದ್ಧಿಗೆ ಮುಂದಾದ ಚೀನಾ: ಭಾರತದೊಂದಿಗಿನ ವಿವಾದದಲ್ಲಿ ಪಾಕ್ ಪರ ನಿಂತ ನೆರೆ ರಾಷ್ಟ್ರ!
ಪಾಕ್ ಜೊತೆ ರಕ್ಷಣಾ ಸಹಕಾರ ವೃದ್ಧಿಗೆ ಮುಂದಾದ ಚೀನಾ: ಭಾರತದೊಂದಿಗಿನ ವಿವಾದದಲ್ಲಿ ಪಾಕ್ ಪರ ನಿಂತ ನೆರೆ ರಾಷ್ಟ್ರ!
Published On :
ಬೀಜಿಂಗ್: ಚೀನಾ ಹಾಗೂ ಪಾಕಿಸ್ತಾನ ಪರಸ್ಪರ ರಕ್ಷಣಾ ಸಹಕಾರವನ್ನು ವೃದ್ಧಿಸುವುದಕ್ಕಾಗಿ ನ.04 ರಂದು ಒಪ್ಪಂದ ಮಾಡಿಕೊಂಡಿದೆ. 
ಪಾಕ್ ಪ್ರಧಾನಿ ಇಮ್ರಾನ್ ಖಾನ್ ಚೀನಾ ಪ್ರಧಾನಿಯೊಂದಿಗೆ ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಈಗಾಗಲೇ ಚೀನಾ ಪಾಕಿಸ್ತಾನಕ್ಕೆ ಅಗತ್ಯವಿರುವ ಆರ್ಥಿಕ ನೆರವು ನೀಡುವುದಾಗಿ ಭರವಸೆ ನೀಡಿದೆ. ಈ ಬೆನ್ನಲ್ಲೇ ಚೀನಾ- ಪಾಕಿಸ್ತಾನ ರಕ್ಷಣಾ ಸಹಕಾರವನ್ನೂ ವೃದ್ಧಿಸುವ ತೀರ್ಮಾನಕ್ಕೆ ಉಭಯ ನಾಯಕರೂ ಬಂದಿದ್ದಾರೆ. 
ದ್ವಿಪಕ್ಷೀಯ ಮಾತುಕತೆ ವೇಳೆ, ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ಪಾಕಿಸ್ತಾನದ ಪ್ರಯತ್ನಗಳನ್ನು ಚೀನಾ ನಾಯಕತ್ವ ಮೆಚ್ಚಿದೆ. ಇದೇ ವೇಳೆ ಸಿಪಿಇಸಿ ಕುರಿತಾಗಿ ನಡೆಯುತ್ತಿರುವ ನಕಾರಾತ್ಮಕ ಪ್ರಚಾರವನ್ನೂ ಉಭಯ ನಾಯಕರೂ ಖಂಡಿಸಿದ್ದು, ಯೋಜನೆಗೆ ಎದುರಾಗುವ ಎಲ್ಲಾ ರೀತಿಯ  ಅಡೆತಡೆಗಳನ್ನೂ ಎದುರಿಸುವುದಾಗಿ ಚೀನಾ-ಪಾಕ್ ಪ್ರಧಾನಿಗಳು ಹೇಳಿದ್ದಾರೆ. 

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.