ನವಾಜ್ ಷರೀಫ್, ಮರಿಯಮ್ ನವಾಜ್ ಜೈಲು ಶಿಕ್ಷೆ ರದ್ದು, ಬಿಡುಗಡೆಗೆ ಇಸ್ಲಾಮಾಬಾದ್ ಹೈ ಕೋರ್ಟ್ ಆದೇಶ

ಪಾಕಿಸ್ತಾನದ ಇಸ್ಲಾಮಾಬಾದ್ ಹೈಕೋರ್ಟ್ ನವಾಜ್ ಷರೀಫ್, ಮರಿಯಮ್ ನವಾಜ್ ಜೈಲು ಶಿಕ್ಷೆಯನ್ನು ರದ್ದುಗೊಳಿಸಿದ್ದು, ಬಿಡುಗಡೆಗೆ ಸೂಚನೆ ನೀಡಿದೆ.
ನವಾಜ್ ಷರೀಫ್, ಮರಿಯಮ್ ನವಾಜ್ ಜೈಲು ಶಿಕ್ಷೆ ರದ್ದು, ಬಿಡುಗಡೆಗೆ ಇಸ್ಲಾಮಾಬಾದ್ ಹೈ ಕೋರ್ಟ್ ಆದೇಶ
ನವಾಜ್ ಷರೀಫ್, ಮರಿಯಮ್ ನವಾಜ್ ಜೈಲು ಶಿಕ್ಷೆ ರದ್ದು, ಬಿಡುಗಡೆಗೆ ಇಸ್ಲಾಮಾಬಾದ್ ಹೈ ಕೋರ್ಟ್ ಆದೇಶ
ಇಸ್ಲಾಮಾಬಾದ್: ಪಾಕಿಸ್ತಾನದ ಇಸ್ಲಾಮಾಬಾದ್ ಹೈಕೋರ್ಟ್ ನವಾಜ್ ಷರೀಫ್, ಮರಿಯಮ್ ನವಾಜ್ ಜೈಲು ಶಿಕ್ಷೆಯನ್ನು ರದ್ದುಗೊಳಿಸಿದ್ದು, ಬಿಡುಗಡೆಗೆ ಸೂಚನೆ ನೀಡಿದೆ. 
ಈ ಹಿಂದೆ ವಿಧಿಸಲಾಗಿದ್ದ ಜೈಲು ಶಿಕ್ಷೆಯನ್ನು ರದ್ದುಗೊಳಿಸಿರುವ ದ್ವಿ ಸದಸ್ಯ ನ್ಯಾಯಪೀಠ, ಷರೀಫ್ ಹಾಗೂ ಪುತ್ರಿ ತಮ್ಮ ಶಿಕ್ಷೆಯನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಪುರಸ್ಕರಿಸಿದೆ. ಲಂಡನ್ ನಲ್ಲಿ ಐಷಾರಾಮಿ ಫ್ಲ್ಯಾಟ್ ಗಳನ್ನು ಖರೀದಿಸಿದ್ದ ಪ್ರಕರಣದಲ್ಲಿ ನವಾಜ್ ಷರೀಫ್ ಹಾಗೂ ಪುತ್ರಿ, ಅಳಿಯನಿಗೆ ಅನುಕ್ರಮವಾಗಿ 11 ವರ್ಷ, 8 ವರ್ಷ ಹಾಗೂ ಒಂದು ವರ್ಷ ಜೈಲು ಶಿಕ್ಷೆ ವಿಧಿಸಲಾಗಿತ್ತು.
ತಲಾ 0.5 ಮಿಲಿಒಯನ್ ರೂಪಾಯಿ ಬಾಂಡ್ ನೀಡುವಂತೆ ಸೂಚಿಸಿರುವ ನ್ಯಾಯಾಲಯ ಜೈಲು ಶಿಕ್ಷೆಯನ್ನು ರದ್ದುಗೊಳಿಸಿದೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com