ಕರಾಚಿ ಮತ್ತು ಪೇಶಾವರ ನಡುವಿನ ಈ ಮೆಗಾ ರೈಲು ಹಳಿ ಸಂಪರ್ಕ ಜೋಡಣೆ ಚೀನಾದ ಒನ್ ಬೆಲ್ಟ್ ಒನ್ ರೋಡ್ ಯೋಜನೆಯ ಅಂಗವಾಗಿದ್ದು, ಇದೀಗ ಈ ಯೋಜನೆಗಾಗಿ ಪಾಕ್ ಸರ್ಕಾರ ದುಬಾರಿ ಹಣ ವ್ಯಯಿಸುವಂತಾಗಿದೆ. ಆದರೆ ಈ ಯೋಜನೆಗೆ ಅಧಿಕ ವೆಚ್ಚ ಮಾಡಲು ನೂತನ ಇಮ್ರಾನ್ ಖಾನ್ ಸರ್ಕಾರ ಹಿಂದೇಟು ಹಾಕುತ್ತಿದ್ದು, ಇತ್ತೀಚೆಗಷ್ಟೇ ಅನಾವಶ್ಯಕ ಖರ್ಚುಗಳನ್ನು ತಗ್ಗಿಸಿ ಪಾಕಿಸ್ತಾನದ ಸಾಲದ ಹೊರೆಯನ್ನು ತಗ್ಗಿಸಬೇಕು ಎಂದು ಪಾಕ್ ಪ್ರಧಾನಿ ನಿರ್ಣಯ ಕೈಗೊಂಡಿದ್ದರು.