ಸೌದಿ ರಾಜನಿಗೆ ಚಾಲಕನಾದ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಕಾಲೆಳೆದ ಟ್ವೀಟರಿಗರು!

ಪುಲ್ವಾಮಾ ಉಗ್ರ ದಾಳಿ ಬಳಿಕ ಕಂಗೆಟ್ಟಿದ್ದ ಪಾಕಿಸ್ತಾನಕ್ಕೆ ಸೌದಿ ಅರೇಬಿಯಾದ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಭೇಟಿ ಕೊಟ್ಟಿರುವುದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಆನೆ ಬಲ ಬಂದತಾಗಿದೆ.
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ
ಇಸ್ಲಾಮಾಬಾದ್: ಪುಲ್ವಾಮಾ ಉಗ್ರ ದಾಳಿ ಬಳಿಕ ಕಂಗೆಟ್ಟಿದ್ದ ಪಾಕಿಸ್ತಾನಕ್ಕೆ ಸೌದಿ ಅರೇಬಿಯಾದ ರಾಜ ಮೊಹಮ್ಮದ್ ಬಿನ್ ಸಲ್ಮಾನ್ ಭೇಟಿ ಕೊಟ್ಟಿರುವುದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಗೆ ಆನೆ ಬಲ ಬಂದತಾಗಿದ್ದು ಇನ್ನು ಸೌದಿ ದೊರೆಗೆ ಸ್ವತಃ ಇಮ್ರಾನ್ ಖಾನ್ ಕಾರು ಚಾಲನೆ ಮಾಡಿರುವುದಕ್ಕೆ ಟ್ವೀಟರಿಗರು ಕಾಲೆಳೆಯುತ್ತಿದ್ದಾರೆ.
ಈ ಹಿಂದೆ ಪಾಕ್ ಪ್ರಧಾನಿ ಸರ್ಕಾರ ನಡೆಸಲು ನಮ್ಮ ಬಳಿ ದುಡ್ಡಿಲ್ಲ ಎಂದು ಹೇಳಿದ್ದ ಇಮ್ರಾನ್ ಖಾನ್ ಗೆ ಹೊಸ ಉದ್ಯೋಗ ದೊರಕಿದೆ ಎಂದು ಟ್ವೀಟರಿಗರು ಸಾಮಾಜಿಕ ಜಾಲತಾಣದಲ್ಲಿ ಪ್ರಶ್ನೆ ಮಾಡುತ್ತಾ ಇಮ್ರಾನ್ ಕಾಲೆಳೆದಿದ್ದಾರೆ.
ಮೊಹಮ್ಮದ್ ಬಿನ್ ಸಲ್ಮಾನ್ ಅವರಿಗೆ ಇಮ್ರಾನ್ ಖಾನ್ ರಾಜಾತಿಥ್ಯವನ್ನು ನೀಡಿದ್ದಾರೆ. ಸೌದಿ ರಾಜನನ್ನು ಆತ್ಮೀಯವಾಗಿ ಬರಮಾಡಿಕೊಂಡ ಇಮ್ರಾನ್ ಶಿಷ್ಟಾಚಾರ ಉಲ್ಲಂಘಿಸಿ, ತಾವೇ ಸ್ವತಃ ಕಾರು ಚಾಲನೆ ಮಾಡುವ ಮೂಲಕ ಸೌದಿ ರಾಜನಿಗೆ ಡ್ರೈವರ್ ಆಗಿದ್ದಾರೆ. ಇದೇ ವೇಳೆ ವಿವಿಧ ಅಭಿವೃದ್ಧಿ ಪರ ಮಹತ್ವದ ಒಪ್ಪಂದಗಳಿಗೆ ಉಭಯ ದೇಶಗಳ ನಾಯಕರು ಸಹಿ ಹಾಕಿದ್ದಾರೆ.
ಸೌದಿ ರಾಜನಿಗಾಗಿ ಕಾರು ಡ್ರೈವರ್ ಆದ ಪ್ರಧಾನಿ ಇಮ್ರಾನ್ ಖಾನ್ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ಅವರ ಕಾರ್ಯಕ್ಕೆ ಟೀಕೆಗಳು ವ್ಯಕ್ತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com