ಪುಲ್ವಾಮಾ ದಾಳಿಯ ನಂತರ, ಮಸೂದ್ ಅಜರ್ನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸುವಂತೆ ವಿಶ್ವಸಂಸ್ಥೆಯ ಭದ್ರತಾ,ಮಂಡಳಿಗೆ ಮಂಡಳಿಯ ಶಾಶ್ವತ ಸದಸ್ಯ ರಾಷ್ಟ್ರಗಳಾದ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ಹೊಸ ಪ್ರಸ್ತಾವನೆ ಸಲ್ಲಿಸಿವೆ. ಆದರೆ ಚೀನಾ ಈ ಕುರಿತು ಇನ್ನೂ ತನ್ನ ನಿರ್ಧಾರ ಹೊರಹಾಕಿಲ್ಲ. ಆದರೆ ಇಂತಹ ನಿರ್ಧಾರವನ್ನು ಚೀನಾ ಈ ಹಿಂದೆ ಮೂರು ಬಾರಿ ನಿರ್ಬಂಧಿಸಿತ್ತು.