ಫನಿ ಚಂಡಮಾರುತದ ಹಾವಳಿ ಬೆನ್ನಲ್ಲೇ, ರೊಮೇನಿಯಾದಲ್ಲಿ ಸುಂಟರಗಾಳಿ ಸೃಷ್ಟಿ ವಿಡಿಯೋ ವೈರಲ್

ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಫನಿ ಚಂಡಮಾರುತ ವ್ಯಾಪಕ ಆತಂಕ ಸೃಷ್ಟಿ ಮಾಡಿರುವಂತೆಯೇ ಅತ್ತ ರೊಮೇನಿಯಾದಲ್ಲಿ ಸುಂಟರಗಾಲಿ ಸೃಷ್ಟಿಯಾಗುವ ಪ್ರಕೃತಿ ವಿಸ್ಮಯದ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ರೊಮೇನಿಯಾದಲ್ಲಿ ಸುಂಟರಗಾಳಿ ಸೃಷ್ಟಿ
ರೊಮೇನಿಯಾದಲ್ಲಿ ಸುಂಟರಗಾಳಿ ಸೃಷ್ಟಿ
Updated on
ಕಲರಾಸಿ: ದಕ್ಷಿಣ ಭಾರತದ ಐದು ರಾಜ್ಯಗಳಲ್ಲಿ ಫನಿ ಚಂಡಮಾರುತ ವ್ಯಾಪಕ ಆತಂಕ ಸೃಷ್ಟಿ ಮಾಡಿರುವಂತೆಯೇ ಅತ್ತ ರೊಮೇನಿಯಾದಲ್ಲಿ ಸುಂಟರಗಾಲಿ ಸೃಷ್ಟಿಯಾಗುವ ಪ್ರಕೃತಿ ವಿಸ್ಮಯದ ವಿಡಿಯೋ ವ್ಯಾಪಕ ವೈರಲ್ ಆಗುತ್ತಿದೆ.
ರೊಮೇನಿಯಾದ ಕಲರಾಸಿ ಪಟ್ಟಣದಲ್ಲಿ ಬೃಹತ್ ಸುಂಟರಗಾಳಿ ಸೃಷ್ಟಿಯ ವಿಡಿಯೋ ಇದೀಗ ವಿಶ್ವದಾದ್ಯಂತ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದೆ. ಈ ಬಗ್ಗೆ ಯೂರೋ ನ್ಯೂಸ್ ವರದಿ ಮಾಡಿದ್ಜು, ಕಲರಾಸಿ ಪಟ್ಟಣದ ನಿವಾಸಿಯೊಬ್ಬರು ತಮ್ಮ ತಾವು ತಂಗಿದ್ದ ಕೊಠಡಿಯಿಂದಲೇ ಬೃಹತ್ ಸುಂಟರಗಾಳಿ ಸೃಷ್ಟಿಯಾಗುತ್ತಿರುವುದನ್ನು ತಮ್ಮ ಮೊಬೈಲ್ ಮೂಲಕ ವಿಡಿಯೋ ಮಾಡಿದ್ದಾರೆ.
ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ವೈರಲ್ ಆಗುತ್ತಿದ್ದು, ಪ್ರಕೃತಿ ವಿಸ್ಮಯ ಅಥವಾ ಪ್ರಕೃತಿ ಮಾತೆಯ ಕೋಪ ಇದೀಗ ಮೊಬೈಲ್ ನಲ್ಲಿ ಸೆರೆಯಾಗಿದೆ.
ಇನ್ನು ಈ ಸುಂಟರಗಾಳಿ ರಭಸಕ್ಕೆ ಕ್ಯಾಲರಸಿಯಲ್ಲಿ 10ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದು, ಸುಂಟರಗಾಳಿ ರಸ್ತೆಯಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕ ಬಸ್ ವೊಂದನ್ನು ಸುಮಾರು 10 ಮೀಟರ್ ಗೂ ಎತ್ತರಕ್ಕೆ ಎತ್ತಿ ಬಿಸಾಡಿದೆ. ಈ ವೇಳೆ ಬಸ್ ನಲ್ಲಿದ್ದ ಪ್ರಯಾಣಿಕರಿಗೂ ಗಾಯಗಳಾಗಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com