ರಷ್ಯಾಗೆ 1 ಬಿಲಿಯನ್ ಡಾಲರ್ ಸಾಲ ನೀಡಲಿರುವ ಭಾರತ: ಉದ್ದೇಶ ಏನು ಗೊತ್ತಾ?

ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಫಾರ್ ಈಸ್ಟ್ ಪ್ರದೇಶದ ಅಭಿವೃದ್ಧಿಗಾಗಿ 1 ಬಿಲಿಯನ್ ಡಾಲರ್ ಸಾಲ ನೀಡುವುದಾಗಿ ಘೋಷಿಸಿದ್ದಾರೆ. 
ಮೋದಿ-ಪುಟಿನ್
ಮೋದಿ-ಪುಟಿನ್
Updated on: 

ವ್ಲಾದಿವೋಸ್ಟೋಕ್: ರಷ್ಯಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅಲ್ಲಿನ ಫಾರ್ ಈಸ್ಟ್ ಪ್ರದೇಶದ ಅಭಿವೃದ್ಧಿಗಾಗಿ 1 ಬಿಲಿಯನ್ ಡಾಲರ್ ಸಾಲ ನೀಡುವುದಾಗಿ ಘೋಷಿಸಿದ್ದಾರೆ. 

5 ನೇ ಈಸ್ಟರ್ನ್ ಎಕಾನಾಮಿಕ್ ಪೋರ್ಮ್ ನ್ನುದ್ದೇಶಿಸಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ಭಾರತ-ರಷ್ಯಾ ಸ್ನೇಹ ಕೇವಲ ಸರ್ಕಾರದ ಸಂವಹನ, ರಾಜಧಾನಿಗಳಿಗೆ ಸೀಮಿತವಾಗದೇ ಜನತೆ ಹಾಗೂ ಉದ್ಯಮಕ್ಕೂ ಸಂಬಂಧಿಸಿದ್ದಾಗಿದೆ ಎಂದು ಹೇಳಿದ್ದಾರೆ. 

ಇದೇ ವೇಳೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರೊಟ್ಟಿಗೆ ರಷ್ಯಾದ ಫಾರ್ ಈಸ್ಟ್ ಪ್ರದೇಶದೊಂದಿಗೆ ಭಾರತದ ಸಹಭಾಗಿತ್ವ ವೃದ್ಧಿಗೆ ಆಕ್ಟ್ ಫಾರ್ ಈಸ್ಟ್ ನೀತಿಗಳನ್ನು ಬಿಡುಗಡೆಗೊಳಿಸಿದ್ದಾರೆ. 

ಫಾರ್ ಈಸ್ಟ್ ಅಭಿವೃದ್ಧಿಗೆ ಭಾರತ 1 ಬಿಲಿಯನ್ ಡಾಲರ್ ನೆರವು ನೀಡಲಿದೆ. ನನ್ನ ಸರ್ಕಾರ ಆಕ್ಟ್ ಈಸ್ಟ್ ಪಾಲಿಸಿಯಡಿಯಲ್ಲಿ ಸಕ್ರಿಯವಾಗಿ ಈಸ್ಟ್ ಏಷ್ಯಾದೊಂದಿಗೆ ಸಹಭಾಗಿತ್ವ ಹೊಂದಿದ್ದು, ಇದು ನಮ್ಮ ಆರ್ಥಿಕ ರಾಜತಾಂತ್ರಿಕತೆಗೆ ಹೊಸ ಆಯಾಮ ನೀಡಲಿದೆ ಎಂದು ಮೋದಿ ಹೇಳಿದ್ದಾರೆ. ರಷ್ಯಾದ ಫಾರ್ ಈಸ್ಟ್ ಪ್ರದೇಶಕ್ಕೆ ಭೇಟಿ ನೀಡಿರುವ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮೋದಿ ಪಾತ್ರರಾಗಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com