ವಿದೇಶ

ಕೊರೋನಾ ವೈರಸ್ ಚಿಕಿತ್ಸೆಗೆ ಟ್ರಂಪ್ ಸಲಹೆ ಕೇಳಿ ದಂಗಾದ ವೈದ್ಯರು, ವಿಜ್ಞಾನಿಗಳು!

ಕೊರೋನಾ ವೈರಸ್ ನಿಂದ ತತ್ತರಿಸಿರುವ ಅಮೆರಿಕಾದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಸಲಹೆ ಕೇಳಿ ವೈದ್ಯರು, ವಿಜ್ಞಾನಿಗಳು ದಂಗಾಗಿದ್ದಾರೆ.

ಕೊರೋನಾ ವೈರಸ್ ಚಿಕಿತ್ಸೆಗೆ ಟ್ರಂಪ್ ಸಲಹೆ ಕೇಳಿ ದಂಗಾದ ವೈದ್ಯರು, ವಿಜ್ಞಾನಿಗಳು!
ಟ್ರಂಪ್
Published On :

ವಾಷಿಂಗ್ ಟನ್: ಕೊರೋನಾ ವೈರಸ್ ನಿಂದ ತತ್ತರಿಸಿರುವ ಅಮೆರಿಕಾದಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿರುವ ಸಲಹೆ ಕೇಳಿ ವೈದ್ಯರು, ವಿಜ್ಞಾನಿಗಳು ದಂಗಾಗಿದ್ದಾರೆ. 

ಬಿಟ್ಟೂ ಬಿಡದೇ ಕಾಡುತ್ತಿರುವ ಈ ಮಹಾಮಾರಿಗೆ ಮದ್ದೇನು? ಎಂದು ವೈದ್ಯಕೀಯ ಸಮೂಹ ತಲೆಕೆಡಿಸಿಕೊಂಡು ಕೂತಿದ್ದರೆ, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬ್ಲೀಚ್ ಸೇರಿದಂತೆ ಸೋಂಕುನಿವಾರಕಗಳನ್ನು ರೋಗಿಗಳಿಗೆ ಇಂಜೆಕ್ಟ್ ಮಾಡುವಂತೆ ಸಲಹೆ ನೀಡಿದ್ದರು. 

ಈ ಸಲಹೆಯನ್ನು ಕೇಳಿದ ವೈದ್ಯಕೀಯ ಪ್ರಪಂಚ ಬೆಚ್ಚಿಬಿದ್ದಿದೆ. ಶ್ವೇತಭವನದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ವಾತಾವರಣದಲ್ಲಿರುವ ಕೊರೋನಾ ವೈರಸ್ ನ್ನು ತೊಲಗಿಸಲು ಬ್ಲೀಚ್ ಸೇರಿದಂತೆ ಸೋಂಕುನಿವಾರಕಗಳನ್ನು ಸಿಂಪಡಿಸಲಾಗುತ್ತದೆ. ಹಾಗೆಯೇ ರೋಗಿಗಳಿಗೂ ಇದನ್ನು ಚುಚ್ಚು ಮದ್ದು ಮೂಲಕ ನೀಡುವುದರಿಂದ ಅವರಲ್ಲಿರುವ ಕೊರೋನಾ ವೈರಸ್ ನ್ನು ತೊಲಗಿಸಬಹುದಾಗಿದೆ, ಶ್ವಾಸಕೋಶ ಇದರಿಂದ ಸ್ವಚ್ಛವಾಗಲಿದೆ ಇದನ್ನು ವೈದ್ಯರು, ವಿಜ್ಞಾನಿಗಳು ಬಹುಶಃ ಪರಿಗಣಿಸಬಹುದೇನೋ ಎಂದು ಹೇಳಿದ್ದರು.

ಆದರೆ ಈ ಬಗ್ಗೆ ವ್ಯಾಪಕ ಟೀಕೆ, ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಅಧ್ಯಕ್ಷರ ಕಚೇರಿಯಿಂದ ಸ್ಪಷ್ಟನೆ ಬಂದಿದ್ದು, ಟ್ರಂಪ್ ಈ ಸಲಹೆಯನ್ನು ವ್ಯಂಗ್ಯಧಾಟಿಯಲ್ಲಿ ಹೇಳಿದ್ದಾರಷ್ಟೇ ಇದಕ್ಕೆ ಹೆಚ್ಚಿನ ಮಹತ್ವ ನೀಡಬೇಕಿಲ್ಲ ಎಂದು ಹೇಳಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.