ಭಾರತದ ಪರಮಾಪ್ತ ಇಸ್ರೇಲ್‌ನಿಂದ ಆ್ಯರೋ 2 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಯಶಸ್ವಿ ಪರೀಕ್ಷೆ!

ಇಸ್ರೇಲ್ ಮತ್ತು ಅಮೆರಿಕ ಆ್ಯರೋ 2 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಿವೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯ ಗುರುವಾರ ತಿಳಿಸಿದೆ.
ಬೆಂಜಮಿನ್-ಮೋದಿ
ಬೆಂಜಮಿನ್-ಮೋದಿ
Updated on: 

ಟೆಲ್ ಅವೀವ್: ಇಸ್ರೇಲ್ ಮತ್ತು ಅಮೆರಿಕ ಆ್ಯರೋ 2 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ಯಶಸ್ವಿಯಾಗಿ ಪರೀಕ್ಷಿಸಿವೆ ಎಂದು ಇಸ್ರೇಲ್ ರಕ್ಷಣಾ ಸಚಿವಾಲಯ ಗುರುವಾರ ತಿಳಿಸಿದೆ.

"ಇಸ್ರೇಲ್ ಕ್ಷಿಪಣಿ ರಕ್ಷಣಾ ಸಂಸ್ಥೆ, ಅಮೆರಿಕ ಕ್ಷಿಪಣಿ ರಕ್ಷಣಾ ಸಂಸ್ಥೆ ಮತ್ತು ಇಸ್ರೇಲಿ ವಾಯುಪಡೆಯೊಂದಿಗೆ ಹೆಟ್ಜ್ -2 ವ್ಯವಸ್ಥೆಯ ಯಶಸ್ವಿ ಪರೀಕ್ಷೆಯನ್ನು ಪೂರ್ಣಗೊಳಿಸಿದೆ ಎಂದು ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ.

ಮಧ್ಯ ಇಸ್ರೇಲ್‌ನಲ್ಲಿ ನಡೆಸಿದ ಪರೀಕ್ಷೆಯ ಸಮಯದಲ್ಲಿ, ಹೆಟ್ಜ್ -2 ವ್ಯವಸ್ಥೆಯು ಗುರಿಯ ಕ್ಷಿಪಣಿ ನಿರ್ದಿಷ್ಟ ಗುರಿಯನ್ನು ಯಶಸ್ವಿಯಾಗಿ ನಾಶಪಡಿಸಿದೆ.

ವಿವಿಧ ಸಂದರ್ಭಗಳಲ್ಲಿ ತಮ್ಮ ಯುದ್ಧ ಸಿದ್ಧತೆ ಮತ್ತು ದಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಇಸ್ರೇಲಿ ಕ್ಷಿಪಣಿ ರಕ್ಷಣೆಯ ವಿವಿಧ ಹಂತಗಳನ್ನು ಈ ಕಾರ್ಯಾಚರಣೆ ಒಳಗೊಂಡಿವೆ.

"ಇಸ್ರೇಲ್ ತನ್ನ ಗಡಿಯ ಹತ್ತಿರ ಮತ್ತು ದೇಶದ ಹೊರಗೆ ಸವಾಲುಗಳನ್ನು ಎದುರಿಸುತ್ತಿದೆ. ಈ ಸಂದರ್ಭದಲ್ಲಿ ಸುಸಜ್ಜಿತ ತಾಂತ್ರಿಕ ಘಟಕ' ನಾವು ಯಾವಾಗಲೂ ನಮ್ಮ ಶತ್ರುಗಳಿಗಿಂತ ಒಂದು ಹೆಜ್ಜೆ ಮುಂದಿದ್ದು, ಜೆರುಸಲೆಮ್ ವಾಯುಗಡಿಯನ್ನು ಯಾವುದೇ ಬೆದರಿಕೆಯಿಂದ ರಕ್ಷಿಸುತ್ತೇವೆ ಎಂದು ಖಚಿತಪಡಿಸುತ್ತದೆ" ಎಂದು ಇಸ್ರೇಲಿ ರಕ್ಷಣಾ ಸಚಿವ ಬೆನ್ನಿ ಗ್ಯಾಂಟ್ಜ್ ಹೇಳಿಕೆ ನೀಡಿದ್ದಾರೆ. 

ಆ್ಯರೋ 2 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು 3,000 ಕಿಲೋಮೀಟರ್ (1,800 ಮೈಲುಗಳಿಗಿಂತ ಹೆಚ್ಚು) ವ್ಯಾಪ್ತಿಯ ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ತಡೆಯಲು ವಿನ್ಯಾಸಗೊಳಿಸಲಾಗಿದೆ

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com