ಬರ್ತ್ ಟೂರಿಸಂಗೆ ಕಡಿವಾಣ ಹಾಕಿದ ಅಮೆರಿಕಾ: ಹೊಸ ನಿಯಮ ಜಾರಿ ಮಾಡಿ ಟ್ರಂಪ್

ಹೆರಿಗೆ ಮಾಡಿಸಿಕೊಳ್ಳುವ ಉದ್ದೇಶದಿಂದ ಅಮೆರಿಕಾ ರಾಷ್ಟ್ರಕ್ಕೆ ಪ್ರಯಾಣ ಬೆಳೆಸುವ ಗರ್ಭಿಣಿಯರಿಗೆ ಬಿ-1 ಹಾಗೂ ಬಿ-2 ವೀಸಾ ನಿರಾಕರಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರ ಕೈಗೊಂಡಿದ್ದಾರೆ. ಬರ್ತ್ ಟೂರಿಸಂ ಎಂದೇ ಅಮೆರಿಕಾದಲ್ಲಿ ಕರೆಯಲಾಗುವ ಈ ವ್ಯವಸ್ಥೆಗೆ ಬ್ರೇಕ್ ಹಾಕುವ ಟ್ರಂಪ್ ನಿಯಮ ಶುಕ್ರವಾರದಿಂದಲೇ ಜಾರಿಗೆ ಬಂದಿದೆ. 
ಟ್ರಂಪ್
ಟ್ರಂಪ್
Updated on: 

ವಾಷಿಂಗ್ಟನ್: ಹೆರಿಗೆ ಮಾಡಿಸಿಕೊಳ್ಳುವ ಉದ್ದೇಶದಿಂದ ಅಮೆರಿಕಾ ರಾಷ್ಟ್ರಕ್ಕೆ ಪ್ರಯಾಣ ಬೆಳೆಸುವ ಗರ್ಭಿಣಿಯರಿಗೆ ಬಿ-1 ಹಾಗೂ ಬಿ-2 ವೀಸಾ ನಿರಾಕರಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನಿರ್ಧಾರ ಕೈಗೊಂಡಿದ್ದಾರೆ. ಬರ್ತ್ ಟೂರಿಸಂ ಎಂದೇ ಅಮೆರಿಕಾದಲ್ಲಿ ಕರೆಯಲಾಗುವ ಈ ವ್ಯವಸ್ಥೆಗೆ ಬ್ರೇಕ್ ಹಾಕುವ ಟ್ರಂಪ್ ನಿಯಮ ಶುಕ್ರವಾರದಿಂದಲೇ ಜಾರಿಗೆ ಬಂದಿದೆ. 

ಅಮೆರಿಕಾದಲ್ಲಿ ಯಾರೇ ಜನಿಸಿದರೂ ಅವರು ದೇಶದ ಪ್ರಜೆಯಾಗುತ್ತಾರೆ ಎಂದು ಸಂವಿಧಾನ ಹೇಳುತ್ತದೆ. ಈ ಅಂಶವನ್ನೇ ಲಾಭವಾಗಿ ಮಾಡಿಕೊಂಡಿರುವ ವಿದೇಶಿಗರು ಬಂಧುಗಳ ಭೇಟಿ, ಚಿಕಿತ್ಸೆ ಹಾಗೂ ಪ್ರವಾಸ ಹೆಸರಿನಲ್ಲಿ ಅಮೆರಿಕಾಕ್ಕೆ ಅತಿಥಿ ವೀಸಾ ಪಡೆದು ಆಗಮಿಸುತ್ತಾರೆ. ಇಲ್ಲೇ ಹೆರಿಗೆ ಮಾಡಿಕೊಂಡು ಮಕ್ಕಳಿಗೆ ಪೌರತ್ವ ಪಡೆಯುತ್ತಿದ್ದಾರೆ. ಈ ಮೂಲಕ ಅಮೆರಿಕಾ ರಾಷ್ಟ್ರಕ್ಕೆ ಹೊರೆಯಾಗುತ್ತಿದ್ದಾರೆಂಬ ಆರೋಪವಿದೆ. 

ಈ ಹಿನ್ನೆಲೆಯಲ್ಲಿ ಯಾರೇ ಮಹಿಳೆಯರು ಹೆರಿಗೆ ಉದ್ದೇಶಕ್ಕೆ ಅಮೆರಿಕಾ ರಾಷ್ಟ್ರಕ್ಕೆ ಬರುತ್ತಿದ್ದಾರೆ ಎಂಬುದು ಖಚಿತವಾದರೆ ಅವರಿಗೆ ವೀಸಾ ನಿರಾಕರಿಸಲು ಹೊಸ ನಿಯಮದಡಿ ದೂತವಾಸ ಅಧಿಕಾರಿಗಳಿಗೆ ಅಮೆರಿಕಾ ಸರ್ಕಾರ ಸೂಚನೆ ನೀಡಿದೆ. ಆದರೆ, ವೀಸಾ ಅರ್ಜಿ ಸಲ್ಲಿಸುವವರಿಗೆ ತಾವು ಗರ್ಭಿಣಿಯೇ ಅಥವಾ ಗರ್ಭಿಯಾಗಲು ಬಯಸಿದ್ದೀರಿಯೇ ಎಂಬೆಲ್ಲಾ ಪ್ರಶ್ರನೆಗಳನ್ನು ಕೇಳದಂತೆಯೂ ತಾಕೀತು ಮಾಡಿದೆ. 

ಅಮೆರಿಕಾದಲ್ಲಿ ಗರ್ಭಿಣಿಯರಿಗೆ ಹೆರಿಗೆ ಮಾಡಿಸಿಕೊಡುವ ದಂಧೆಯೇ ಇದ್ದು, ಪ್ರತಿ ಗರ್ಭಿಣಿಯರಿಂದ 1 ಲಕ್ಷ ಡಾಲರ್ ಪಡೆಯಲಾಗುತ್ತಿತ್ತು ಎಂದು ವಿದೇಶಾಂಗ ಇಲಾಖೆ ಮಾಹಿತಿ ನೀಡಿದೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com