ವಿದೇಶ

ಕೊರೋನಾ ವಿರುದ್ಧದ ಹೋರಾಟದಲ್ಲಿ ದೊಡ್ಡ ಪ್ರಗತಿ, ರೋಗಿಯ ಜೀವ ಉಳಿಸಬಲ್ಲ ಔಷಧಿ ಲಭ್ಯ

ಮಹಾಮಾರಿ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ದೊಡ್ಡ ಪ್ರಗತಿ ಸಾಧಿಸಲಾಗಿದ್ದು, ಅತ್ಯಂತ ಗಂಭೀರವಾದ ಕೊವಿಡ್-19 ಪ್ರಕರಣಗಳಲ್ಲಿ ಮೂರನೇ ಒಂದು ಭಾಗದಷ್ಟು ರೋಗಿಗಳ ಜೀವ ಉಳಿಸುವ ಔಷಧಿಯನ್ನು ಕಂಡುಹಿಡಿಯಲಾಗಿದೆ.

ಕೊರೋನಾ ವಿರುದ್ಧದ ಹೋರಾಟದಲ್ಲಿ ದೊಡ್ಡ ಪ್ರಗತಿ, ರೋಗಿಯ ಜೀವ ಉಳಿಸಬಲ್ಲ ಔಷಧಿ ಲಭ್ಯ
ಸಾಂದರ್ಭಿಕ ಚಿತ್ರ
Published On :

ಪ್ಯಾರಿಸ್: ಮಹಾಮಾರಿ ಕೊರೋನಾ ವೈರಸ್ ವಿರುದ್ಧದ ಹೋರಾಟದಲ್ಲಿ ದೊಡ್ಡ ಪ್ರಗತಿ ಸಾಧಿಸಲಾಗಿದ್ದು, ಅತ್ಯಂತ ಗಂಭೀರವಾದ ಕೊವಿಡ್-19 ಪ್ರಕರಣಗಳಲ್ಲಿ ಮೂರನೇ ಒಂದು ಭಾಗದಷ್ಟು ರೋಗಿಗಳ ಜೀವ ಉಳಿಸುವ ಔಷಧಿಯನ್ನು ಕಂಡುಹಿಡಿಯಲಾಗಿದೆ.

ಅತ್ಯಂತ ಕಡಿಮೆ ಬೆಲೆಗೆ ಸಿಗುವ ʼಡೆಕ್ಸಮೆಥಾಸೊನ್ʼ(Dexamethasone) ಎಂಬ ಐಷಧಿಯನ್ನು ಕೊವಿಡ್‌-19 ನಿಂದ ಬಳಲುತ್ತಿರುವ ರೋಗಿಗೆ ನೀಡಿದರೆ ಗುಣವಾಗುವ ಸಾಧ್ಯತೆ ಹೆಚ್ಚು ಎಂದು ಆಕ್ಸ್‌ಫರ್ಡ್ ವಿಶ್ವವಿದ್ಯಾಲಯದ ಸಂಶೋಧಕರ ತಂಡ ಹೇಳಿದೆ.

ಡೆಕ್ಸಮೆಥಾಸೊನ್ ನೀಡಿದ್ದರಿಂದ ಇಂಗ್ಲೆಂಡ್‌ನಲ್ಲಿ ಸಾವಿನ ದವಡೆಯಲ್ಲಿದ್ದ ಸುಮಾರು 5 ಸಾವಿರ ರೋಗಿಗಳನ್ನು ಪಾರುಮಾಡಲಾಗಿದೆ. 20 ರೋಗಿಗಳ ಪೈಕಿ 19 ರೋಗಿಗಳು ಆಸ್ಪತ್ರೆಗೆ ದಾಖಲಾಗುವ ಅಗತ್ಯವಿಲ್ಲ. ಆದರೆ ಇತರೇ ರೋಗಗಳಿಂದಾಗಿ ಹೈ ರಿಸ್ಕ್‌ ನಲ್ಲಿರುವ ರೋಗಿಗಳಿಗೆ ವೆಂಟಿಲೇಟರ್‌ ಅಗತ್ಯವಿದೆ ಎಂದು ಸಂಶೋಧಕರು ಅಭಿಪ್ರಾಯ ಪಟ್ಟಿದ್ದಾರೆ.

ಈ ತಂಡದಲ್ಲಿದ್ದ ಪ್ರೊ. ಪೀಟರ್‌ ಹಾರ್ಬಿ ಪ್ರತಿಕ್ರಿಯಿಸಿ, ಸದ್ಯ ಸಾವನ್ನು ತಪ್ಪಿಸಲು ಇರುವ ಏಕೈಕ ಔಷಧಿ ಇದು. ಈ ಡ್ರಗ್ಸ್‌ ಸಾವಿನ ಪ್ರಮಾಣವನ್ನು ಭಾರೀ ಸಂಖ್ಯೆಯಲ್ಲಿ ಕಡಿಮೆ ಮಾಡುತ್ತದೆ. ಕೊರೋನಾ ವೈರಸ್‌ ಲಸಿಕೆ ವಿಚಾರದಲ್ಲಿ ಇದೊಂದು ಮಹತ್ವದ ತಿರುವ ನೀಡಬಲ್ಲ ವಿಚಾರ ಎಂದು ಹೇಳಿದ್ದಾರೆ.

ನಾನು ಬಹಳ ಸ್ಪಷ್ಟವಾಗಿ ಹೇಳುತ್ತಿದ್ದೇನೆ. ಈ ಔಷಧಿಯಿಂದ ಖಂಡಿತವಾಗಿಯೂ ಲಾಭವಿದೆ. ಒಂದು ಡೆಕ್ಸಮೆಥಾಸೊನ್ ಗೆ 5 ಪೌಂಡ್‌(481. ರೂ.) ಖರ್ಚಾಗಬಹುದು. ಹೀಗಾಗಿ 10 ದಿನಗಳಿಗೆ 35 ಪೌಂಡ್‌(3,400 ರೂ.) ಆಗಬಹುದು. ಈ ಡ್ರಗ್ಸ್‌ ವಿಶ್ವದೆಲ್ಲೆಡೆ ಲಭ್ಯವಿದೆ. ವಿಶೇಷವಾಗಿ ಬಡ ರಾಷ್ಟ್ರಗಳಿಗೆ ಇದರಿಂದ ಬಹಳ ಸಹಾಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.