ಲುಕ್ಸೋರ್: ವಿಶ್ವದಾದ್ಯಂತ ಈಗಾಗಲೇ ತೀವ್ರ ಆತಂಕ ಮೂಡಿಸಿರುವ ಮಾರಕ ಕೊರೋನಾ ವೈರಸ್ ವ್ಯಾಧಿ ತನ್ನ ಕಬಂಧ ಬಾಹುವನ್ನು ಮತ್ತಷ್ಟು ವಿಸ್ತರಿಸಿದೆ. ಈ ಮಹಾಮಾರಿ ಇದೀಗ ಈಜಿಪ್ಟ್'ಗೂ ತಟ್ಟಿದ್ದು, ಹಡಗೊಂಡರಲ್ಲಿ 33 ಮಂದಿಯಲ್ಲಿ ವೈರಸ್ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ಹಡಗಿನಲ್ಲಿ 18 ಮಂದಿ ಮಂದಿ ಭಾರತೀಯರಿದ್ದು, 6 ಮಂದಿ ಮಹಿಳೆಯರು, 12 ಮಂದಿ ಪುರುಷರಿದ್ದು ಇವರೆಲ್ಲಾ ತಮಿಳುನಾಡು ಮೂಲದವರೆಂದು ವರದಿಗಳಿಂದ ತಿಳಿದುಬಂದಿದೆ. ಪ್ರಸ್ತುತ ಭಾರತೀಯರನ್ನು ಪ್ರತ್ಯೇಕವಾಗಿರಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಈ ನಡುವೆ ಕಾಂಚೀಪುರಂನಲ್ಲಿರುವ 45 ವರ್ಷದ ಮಹಿಳೆಯೊಬ್ಬರಲ್ಲಿ ಸೋಂಕು ಪತ್ತೆಯಾಗಿದ್ದು, ಇವರೊಂದಿಗೆ ಸಂಪರ್ಕ ಹೊಂದಿದ್ದ 8 ಮಂದಿಯನ್ನೂ ಚೆನ್ನೈನಲ್ಲಿ ಪರಿಶೀಲನೆ ನಡೆಸಲಾಗುತ್ತಿದೆ ಎನ್ನಲಾಗುತ್ತಿದೆ.
ಈ ಹಿಂದೆ ಕೇರಳ ರಾಜ್ಯದಲ್ಲಿ ಐವರು ಮಂದಿಯಲ್ಲಿ ಮತ್ತೆ ಹೊಸದಾಗಿ ವೈರಸ್ ಪತ್ತೆಯಾಗಿದ್ದು ಎಂದು ಅಲ್ಲಿನ ಆರೋಗ್ಯ ಸಚಿವೆ ಕೆ.ಕೆ. ಶೈಲಜಾ ಅವರು ಮಾಹಿತಿ ನೀಡಿದ್ದಾರೆ.
ಇಟಲಿಯಿಂದ ಮರಳಿ ಕೇರಳ ರಾಜ್ಯಕ್ಕೆ ಬಂದಿದ್ದ ಐವರಲ್ಲಿ ವೈರಸ್ ಪತ್ತೆಯಾಗಿದ್ದು, ಪ್ರತ್ಯೇಕ ಕೊಠಡಿಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಎಲ್ಲರಲ್ಲೂ ವೈರಸ್ ಇರುವುದು ದೃಢವಾಗಿದೆ ಎಂದು ಹೇಳಲಾಗುತ್ತಿದೆ.
Advertisement