ಸಾವಿನ ಮನೆಯಂತಾದ ಇಟಲಿ: ಕೊರೋನಾಗೆ ಒಂದೇ ದಿನ 793 ಮಂದಿ ಬಲಿ, ವಿಶ್ವದಾದ್ಯಂತ 12,831 ಸಾವು!

ಇಟಲಿಯಲ್ಲಿ ಮಹಾಮಾರಿ ಕೊರೋನಾ ತನ್ನ ರೌದ್ರನರ್ತನವನ್ನು ಮುಂದುವರೆಸಿದೆ. ಶನಿವಾರ ಒಂದೇ ದಿನ ಬರೋಬ್ಬರಿ 793 ಮಂದಿ ಬಲಿಯಾಗಿದ್ದು ಇದೇ ಮೊದಲು ಒಂದು ದಿನ ಕೊರೋನಾಗೆ ಈ ಪ್ರಮಾಣದಲ್ಲಿ ಬಲಿಯಾಗಿರುವುದು. ಇದರೊಂದಿಗೆ ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 4,825ಕ್ಕೆ ಏರಿಕೆಯಾಗಿದೆ.ಸಾವಿನ ಮನೆಯಂತಾದ ಇಟಲಿ
ಇಟಲಿ ಸೇನೆ
ಇಟಲಿ ಸೇನೆ
Updated on: 

ರೋಮ್/ನವದೆಹಲಿ: ಇಟಲಿಯಲ್ಲಿ ಮಹಾಮಾರಿ ಕೊರೋನಾ ತನ್ನ ರೌದ್ರನರ್ತನವನ್ನು ಮುಂದುವರೆಸಿದೆ. ಶನಿವಾರ ಒಂದೇ ದಿನ ಬರೋಬ್ಬರಿ 793 ಮಂದಿ ಬಲಿಯಾಗಿದ್ದು ಇದೇ ಮೊದಲು ಒಂದು ದಿನ ಕೊರೋನಾಗೆ ಈ ಪ್ರಮಾಣದಲ್ಲಿ ಬಲಿಯಾಗಿರುವುದು. ಇದರೊಂದಿಗೆ ದೇಶದಲ್ಲಿ ಸೋಂಕಿಗೆ ಬಲಿಯಾದವರ ಸಂಖ್ಯೆ 4,825ಕ್ಕೆ ಏರಿಕೆಯಾಗಿದೆ. 

ಇದರ ಜೊತೆಗೆ ಜಗತ್ತಿನಲ್ಲಿ ಒಟ್ಟಾರೆ ಈ ಒಂದು ದಿನದಲ್ಲೇ 1,397 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಇದರೊಂದಿಗೆ ಒಟ್ಟಾರೆ ಜಗತ್ತಿನಾದ್ಯಂತ 12,831 ಮಂದಿ ಕೊರೋನಾಗೆ ಬಲಿಯಾಗಿದ್ದು 22 ಸಾವಿರ ಪ್ರಕರಣಗಳು ಹೊಸದಾಗಿ ಪತ್ತೆಯಾಗಿವೆ.

ಕೊರೋನಾ ವೈರಸ್: ಭಾರತದಲ್ಲಿ 300ರ ಗಡಿ ದಾಡಿದ ಸೋಂಕಿತರ ಸಂಖ್ಯೆ!
ಇದೇ ವೇಳೆ ಭಾರತದಲ್ಲೂ ಇಂದು ಹೊಸದಾಗಿ 80 ಪ್ರಕರಣಗಳು ಪತ್ತೆಯಾಗಿದ್ದು ಒಟ್ಟಾರೆ 329 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. ಇದಾಗಲೇ ಐವರು ಮೃತಪಟ್ಟಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com