ವಿದೇಶ

ಅಮೆರಿಕದಲ್ಲಿ ಒಂದು ಲಕ್ಷ ಮಂದಿ ಕೊರೋನಾ ವೈರಸ್ ನಿಂದ ಸಾಯುವ ಸಾಧ್ಯತೆ: ಡೊನಾಲ್ಡ್ ಟ್ರಂಪ್

ಮಾರಕ ಕೊರೋನಾ ವೈರಸ್ ಗೆ ಅಮೆರಿಕ ದೇಶವೊಂದರಲ್ಲೇ ಸುಮಾರು 1 ಲಕ್ಷ ಮಂದಿ ಸಾಯುವ ಸಾಧ್ಯತೆ ಇದೆ ಎಂದು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಅಮೆರಿಕದಲ್ಲಿ ಒಂದು ಲಕ್ಷ ಮಂದಿ ಕೊರೋನಾ ವೈರಸ್ ನಿಂದ ಸಾಯುವ ಸಾಧ್ಯತೆ: ಡೊನಾಲ್ಡ್ ಟ್ರಂಪ್
ಡೊನಾಲ್ಡ್ ಟ್ರಂಪ್
Published On :

ವಾಷಿಂಗ್ಟನ್: ಮಾರಕ ಕೊರೋನಾ ವೈರಸ್ ಗೆ ಅಮೆರಿಕ ದೇಶವೊಂದರಲ್ಲೇ ಸುಮಾರು 1 ಲಕ್ಷ ಮಂದಿ ಸಾಯುವ ಸಾಧ್ಯತೆ ಇದೆ ಎಂದು ಸ್ವತಃ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

‘ಫಾಕ್ಸ್ ನ್ಯೂಸ್‌‌’ ಆಯೋಜಿಸಿದ್ದ ‘ಟೌನ್‌ ಹಾಲ್‌’ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, 'ಕೊರೋನಾ ವೈರಸ್‌ನಿಂದಾಗಿ ಅಮೆರಿಕದಲ್ಲಿ ಸುಮಾರು ಒಂದು ಲಕ್ಷ ಜನರು ಸಾವಿಗೀಡಾಗಬಹುದು. ವರ್ಷಾಂತ್ಯದೊಳಗೆ ಈ ರೋಗಕ್ಕೆ ಲಸಿಕೆ  ಕಂಡುಹಿಡಿಯುವುದಾಗಿ ಭರವ‌ಸೆ ನೀಡಿದ್ದಾರೆ.

‘ಅಮೆರಿಕದಲ್ಲಿ ಹತ್ತು ಲಕ್ಷಕ್ಕೂ ಹೆಚ್ಚಿನ ಮಂದಿ ಕೊರೊನಾ ವೈರಸ್ ಸೋಂಕಿಗೀಡಾಗಿದ್ದಾರೆ. ದಿನೇ ದಿನೇ ಸಾವಿನ ಸಂಖ್ಯೆ ಹೆಚ್ಚುತ್ತಿದ್ದು, ಸುಮಾರು ಒಂದು ಲಕ್ಷ ಸಾವನ್ನಪ್ಪಬಹುದು. ಇದೊಂದು ಭಯಾನಕ ಮತ್ತು ನೋವಿನ ಸಂಗತಿ. ಈ ವರ್ಷಾಂತ್ಯದ ವೇಳೆಗೆ ನಾವು ಲಸಿಕೆ  ಪಡೆಯಲಿದ್ದೇವೆ. ಮತ್ತು ಈ ವರ್ಷದ ಸೆಪ್ಟೆಂಬರ್‌ ಹೊತ್ತಿಗೆ ಶಾಲೆ, ವಿಶ್ವವಿದ್ಯಾಲಯಗಳು ಆರಂಭಗೊಳ್ಳಲಿವೆ. ವಿದ್ಯಾರ್ಥಿಗಳು ಶಾಲೆಗೆ ಹೋಗುವುದನ್ನು ನೋಡಬೇಕಿದೆ. ಇದೇ ವೇಳೆ ಪಾತಾಳಕ್ಕೆ ಕುಸಿದಿರುವ ಅಮೆರಿಕದ ಆರ್ಥಿಕತೆ ಶೀಘ್ರದಲ್ಲೇ ಚೇತರಿಸಿಕೊಳ್ಳಲಿದೆ ಎಂದು ಟ್ರಂಪ್ ವಿಶ್ವಾಸ  ವ್ಯಕ್ತಪಡಿಸಿದರು. 

ಚೀನಾದ ಪ್ರಯೋಗಾಲಯದಲ್ಲೇ ವೈರಸ್
ಅಂತೆಯೇ ಇಡೀ ಜಗತ್ತಿಗೆ ಸಾಂಕ್ರಾಮಿಕ ರೋಗ ಹಬ್ಬಲು ಚೀನಾ ಕಾರಣ ಎನ್ನುವ ವಾದವನ್ನೂ ಅವರು ಬಲವಾಗಿ ಪ್ರತಿಪಾದಿಸಿದ ಟ್ರಂಪ್, ಕೊರೊನಾ ವೈರಸ್‌ ಚೀನಾದ‌ ಪ್ರಯೋಗಾಲಯದಲ್ಲಿಯೇ ಸೃಷ್ಟಿಯಾಗಿದೆ ಎನ್ನಲು ಸಾಕಷ್ಟು ಸಾಕ್ಷ್ಯಗಳಿವೆ ಎಂದು ಹೇಳಿದರು.

ಇದೇ ವಿಚಾರವಾಗಿ ಈ ಹಿಂದೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಅಮೆರಿಕ ಕೊರೊನಾ ವೈರಸ್‌ ಚೀನಾದ‌ ಪ್ರಯೋಗಾಲಯದಲ್ಲಿಯೇ ಸೃಷ್ಟಿಯಾಗಿದೆ ಎನ್ನಲು ಸಾಕಷ್ಟು ಸಾಕ್ಷ್ಯಗಳಿವೆ ಅವರು, ಅತ್ಯುನ್ನತ ಗುಣಮಟ್ಟದ ಪ್ರಯೋಗಾಲಯಗಳನ್ನು ಹೊಂದಿರುವ ಚೀನಾ, ಪ್ರಪಂಚಕ್ಕೆ  ಸೋಂಕು ತಗುಲಿಸುವ ಇತಿಹಾಸವನ್ನು ಹೊಂದಿದೆ ಎಂದು ಕಿಡಿಕಾರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.