ಚೀನಾದಲ್ಲಿ ಮಂಗಗಳ ಮೇಲೆ ಕೋವಿಡ್-19 ಲಸಿಕೆ ಪ್ರಯೋಗ ಯಶಸ್ವಿ!
ಕೊರೋನಾ ವೈರಸ್ ವಿರುದ್ಧ ಲಸಿಕೆ ಸಿದ್ಧಪಡಿಸಲು ಇಡೀ ಪ್ರಪಂಚವೇ ಹೆಣಗುತ್ತಿದೆ. ಆದರೆ ಚೀನಾ ಮಾತ್ರ ಸದ್ದಿಲ್ಲದೇ ಕೊರೋನಾ ವೈರಸ್ ವಿರುದ್ಧದ ಲಸಿಕೆಯ ಪ್ರಯೋಗವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ.

ಬೀಜಿಂಗ್: ಕೊರೋನಾ ವೈರಸ್ ವಿರುದ್ಧ ಲಸಿಕೆ ಸಿದ್ಧಪಡಿಸಲು ಇಡೀ ಪ್ರಪಂಚವೇ ಹೆಣಗುತ್ತಿದೆ. ಆದರೆ ಚೀನಾ ಮಾತ್ರ ಸದ್ದಿಲ್ಲದೇ ಕೊರೋನಾ ವೈರಸ್ ವಿರುದ್ಧದ ಲಸಿಕೆಯ ಪ್ರಯೋಗವನ್ನು ಯಶಸ್ವಿಯಾಗಿ ಮುಕ್ತಾಯಗೊಳಿಸಿದೆ.
ವರದಿಗಳ ಪ್ರಕಾರ ಚೀನಾ ಮೊದಲ ಕೊರೋನಾ ಲಸಿಕೆ-PiCoVacc ಪ್ರಯೋಗವನ್ನು ಪ್ರಾಣಿಗಳ ಮೇಲೆ ನಡೆಸಲಾಗಿದೆ. ಮಂಗಗಳಿಗೆ ನೀಡಿರುವ ಈ ಲಸಿಕೆ ಪರಿಣಾಮಕಾರಿಯಾದ ಫಲಿತಾಂಶ ನೀಡಿದೆ ಎನ್ನಲಾಗುತ್ತಿದೆ. ಕೋವಿಡ್-19 ಲಸಿಕೆ PiCoVaccಯನ್ನು ಬೀಜಿಂಗ್ ಮೂಲದ ಸಿನೋವಾಕ್ ಬಯೋಟೆಕ್ ಅಭಿವೃದ್ಧಿಪಡಿಸಿದೆ.
ವಿಶಿಷ್ಟ ವಿಧಾನದ ಮೂಲಕ ಈ ಲಸಿಕೆಯನ್ನು ಕೊರೋನಾ ವೈರಸ್ ಸೋಂಕಿಗೆ ಕಂಡುಹಿಡಿಯಲಾಗಿದ್ದು, ದುರ್ಬಲಗೊಂಡ ಕೊರೋನಾ ವೈರಸ್ ನ್ನು ಪ್ರಾಣಿಗಳ ದೇಹಕ್ಕೆ ಸೇರಿಸಿ ಸಹಜವಾಗಿಯೇ ಕೊರೋನಾ ವಿರುದ್ಧ ಪ್ರತಿಕಾಯಗಳು ಸೃಷ್ಟಿಯಾಗುವಂತೆ ಮಾಡಲಾಗುತ್ತದೆ. ಈ ಪ್ರತಿಕಾಯಗಳು ಸಾಮಾನ್ಯ ವೈರಾಣುಗಳನ್ನೂ ಸಹ ಕೊಲ್ಲಲಿದೆ.
ಭಾರತದ ಮೂಲದ ರೀಸಸ್ ಮಕಾಕ್ ಎಂಬ ಪ್ರಬೇಧದ ಮಂಗಗಳ ಮೇಲೆ ಈ ಲಸಿಕೆಯನ್ನು ಚೀನಾ ಪ್ರಯೋಗಿಸಿ ಮೂರು ವಾರಗಳ ನಂತರ ಕೊರೋನಾ ವೈರಾಣು ಸೋಂಕು ತಗುಲುವಂತೆ ಮಾಡಿದೆ. ಹೆಚ್ಚು ಪ್ರಮಾಣದ ಲಸಿಕೆಯನ್ನು ನೀಡಿದ್ದ ಮಂಗಳಲ್ಲಿ ಕೊರೋನಾ ಕಂಡುಬಂದಿಲ್ಲ. ಲಸಿಕೆ ನೀಡದೇ ಇದ್ದ ಮಂಗಳಲ್ಲಿ ಕೊರೋನಾ ಉಲ್ಬಣಗೊಂಡಿದೆ. ಏಪ್ರಿಲ್ ಮಧ್ಯ ಭಾಗದಿಂದ ಈ ಲಸಿಕೆಯನ್ನು ಚೀನಾ ಮನುಷ್ಯರ ಮೇಲೆಯೂ ಪ್ರಯೋಗಿಸುತ್ತಿದ್ದು, ಕೋವಿಡ್ ತಡೆಗೆ ಇದು ಆಶಾದಾಯಕವಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


