ಅಮೆರಿಕಾ: ಜಲಪಾತದ ಬಳಿ ಭಾವಿ ಪತಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಭಾರತೀಯ ಯುವತಿ ಸಾವು!

ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಆತುರದಲ್ಲಿ ಮದುವೆಯಾಗಿ ಬಾಳಿ ಬದುಕಬೇಕಿದ್ದ ಭಾರತೀಯ ಟೆಕ್ಕಿಯೊಬ್ಬರು ದಾರುಣ ಸಾವನ್ನಪ್ಪಿದ್ದಾರೆ.
ಕಮಲಾ
ಕಮಲಾ
Updated on: 

ವಾಷಿಂಗ್ಟನ್: ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಆತುರದಲ್ಲಿ ಮದುವೆಯಾಗಿ ಬಾಳಿ ಬದುಕಬೇಕಿದ್ದ ಭಾರತೀಯ ಟೆಕ್ಕಿಯೊಬ್ಬರು ದಾರುಣ ಸಾವನ್ನಪ್ಪಿದ್ದಾರೆ. 

ಅಮೆರಿಕಾದ ಜಲಪಾತದಲ್ಲಿ ಬಳಿ ಭಾವಿ ಪತಿ ಜೊತೆ ಸೆಲ್ಫಿ ಕ್ಲಿಕ್ಕಿಸಿಕೊಳ್ಳುವಾಗ ಕಾಲು ಜಾರಿ ಆಂಧ್ರ ಪ್ರದೇಶದ ಯುವತಿ ಕಮಲಾ ಎಂಬುವರು ಮೃತಪಟ್ಟಿದ್ದಾರೆ. 

ಕಮಲಾ
ಕಮಲಾ

ಅಮೆರಿಕಾದ ಬಾಲ್ಡ್ ರಿವರ್ ಫಾಲ್ಸ್ ಗೆ ಭಾವಿ ಪತಿ ಜೊತೆ ಕಮಲಾ ತೆರಳಿದ್ದರು. ಈ ವೇಳೆ ಕಾಲು ಜಾರಿ ಇಬ್ಬರು ಕೆಳಗೆ ಬಿದ್ದಿದ್ದಾರೆ. ಈ ವೇಳೆ ಕಮಲಾಳ ಭಾವಿ ಪತಿಯನ್ನು ರಕ್ಷಣೆ ಮಾಡಿದ್ದಾರೆ. ಆದರೆ ಕಮಲಾ ಅವರು ಎಲ್ಲೂ ಸಿಗಲಿಲ್ಲ. ಸ್ವಲ್ಪ ಸಮಯದ ನಂತರ ಕಮಲಾ ಜಲಪಾತದಿಂದ ಸ್ವಲ್ಪ ದೂರದಲ್ಲಿ ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿರುವುದು ಕಂಡಿದೆ. ಕೂಡಲೇ ಅವರನ್ನು ಸಿಬ್ಬಂದಿ ಮೇಲಕ್ಕೆ ಎತ್ತಿದರೂ ಆದರೆ ಅಷ್ಟರಲ್ಲೇ ಅವರು ಮೃತಪಟ್ಟಿದ್ದಾರೆ. 

ಎಂಜಿನಿಯರಿಂಗ್ ಪದವಿ ಮುಗಿಸಿದ್ದ ಕಮಲಾ ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಅಮೆರಿಕಾಗೆ ತೆರಳಿದ್ದರು. ನಂತರ ಅಲ್ಲೆ ಕೆಲಸಕ್ಕೆ ಸೇರಿಕೊಂಡಿದ್ದರು. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com