ಚೀನಾದ ಆಸ್ಪತ್ರೆಗಳಲ್ಲಿ ಹೆಣಗಳ ರಾಶಿ: ಕೋವಿಡ್ ನಿಂದ ಲಕ್ಷಾಂತರ ಮಂದಿ ಸಾವು!

ಜಾಗತಿಕ ಮಟ್ಟದಲ್ಲಿ ಕೋವಿಡ್ ಪ್ರಕರಣಗಳು ಇಳಿಕೆಯಾಗುತ್ತಿದ್ದರೆ, ಚೀನಾದಲ್ಲಿ ಮಾತ್ರ ಕೋವಿಡ್ ಪ್ರಕರಣಗಳು ಏರುಗತಿಯಲ್ಲಿದೆ.
ಚೀನಾದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಳ
ಚೀನಾದಲ್ಲಿ ಕೋವಿಡ್ ಸಂಖ್ಯೆ ಹೆಚ್ಚಳ
Updated on

ಬೀಜಿಂಗ್: ಜಾಗತಿಕ ಮಟ್ಟದಲ್ಲಿ ಕೋವಿಡ್ ಪ್ರಕರಣಗಳು ಇಳಿಕೆಯಾಗುತ್ತಿದ್ದರೆ, ಚೀನಾದಲ್ಲಿ ಮಾತ್ರ ಕೋವಿಡ್ ಪ್ರಕರಣಗಳು ಏರುಗತಿಯಲ್ಲಿದೆ.
 
ಅಲ್ಲಿನ ಸರ್ಕಾರ ಶೂನ್ಯ ಕೋವಿಡ್ ನೀತಿಯನ್ನು ಘೋಷಿಸಿದ್ದು, ಕಠಿಣ ಲಾಕ್ ಡೌನ್ ನಿರ್ಬಂಧಗಳನ್ನು ವಿಧಿಸಿತ್ತು. ತೀವ್ರ ವಿರೋಧದ ಬಳಿಕ ಸರ್ಕಾರ ತನ್ನ ನೀತಿಯನ್ನು ಪರಿಷ್ಕರಿಸಿತ್ತು. ಈ ಬಳಿಕ ಕೋವಿಡ್-19 ಪ್ರಕರಣಗಳು ಏರಿಗತಿಯಲ್ಲಿ ವರದಿಯಾಗುತ್ತಿವೆ.

ಹೆಚ್ಚುತ್ತಿರುವ ಸೋಂಕುಗಳಿಂದಾಗಿ ಆಸ್ಪತ್ರೆಯಲ್ಲಿ ಜಾಗವೇ ಇಲ್ಲದಂತಾಗಿದೆ. ಸರ್ಕಾರದಿಂದ ಈ ಬಗ್ಗೆ ಅಧಿಕೃತ ಮಾಹಿತಿ ಇಲ್ಲವಾದರೂ, ಶವಾಗಾರಗಳಲ್ಲಿ ಕೋವಿಡ್-19 ಸಾವುಗಳ ಪ್ರಕರಣಗಳನ್ನು ನಿಭಾಯಿಸುವುದಕ್ಕಾಗಿ ಅಲ್ಲಿನ ಸಿಬ್ಬಂದಿಗಳು ಹೆಚ್ಚಿನ ಸಮಯ ಕಾರ್ಯನಿರ್ವಹಿಸಬೇಕಾಗುತ್ತಿದೆ. 

ಇತ್ತ ಫೀಗಲ್-ಡಿಂಗ್ ಹೇಳಿಕೆಯನ್ನು ಅಮೇರಿಕಾದ ಮೂಲದ ಆರೋಗ್ಯ ಮೆಟ್ರಿಕ್ಸ್ ಹಾಗೂ ಮೌಲ್ಯಮಾಪನ ಸಂಸ್ಥೆ (ಐಹೆಚ್ಎಂಇ) ಬೆಂಬಲಿಸಿದ್ದು, ಈ ಸಂಸ್ಥೆ 2023 ರಲ್ಲಿ ಚೀನಾದಲ್ಲಿ ಕೋವಿಡ್ ಸಂಬಂಧಿತ ಲಕ್ಷಾಂತರ ಸಾವು ನೋವುಗಳು ಸಂಭವಿಸಲಿದೆ ಎಂದು ವಿಶ್ಲೇಷಿಸಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com