ಪಾಕ್ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಸಂಸದರನ್ನು ಖರೀದಿಸಲು ಯತ್ನಿಸುತ್ತಿರುವ ಆಡಿಯೋ ಬಹಿರಂಗ

ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮತ್ತೊಂದು ಆಪಾದಿತ ಆಡಿಯೋ ಶುಕ್ರವಾರ ಹೊರಬಿದ್ದಿದ್ದು, ಅದರಲ್ಲಿ ಅವರು ಶಾಸಕರ ನಿಷ್ಠೆಯನ್ನು ಖರೀದಿಸಲು ಪ್ರಯತ್ನಿಸಿದ್ದಾರೆ. ಅಲ್ಲದೆ ಕಳೆದ ಏಪ್ರಿಲ್‌ನಲ್ಲಿ ಸಂಸತ್ತಿನಲ್ಲಿ
ಇಮ್ರಾನ್ ಖಾನ್
ಇಮ್ರಾನ್ ಖಾನ್
Updated on: 

ಇಸ್ಲಾಮಾಬಾದ್: ಪಾಕಿಸ್ತಾನ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರ ಮತ್ತೊಂದು ಆಪಾದಿತ ಆಡಿಯೋ ಶುಕ್ರವಾರ ಹೊರಬಿದ್ದಿದ್ದು, ಅದರಲ್ಲಿ ಅವರು ಶಾಸಕರ ನಿಷ್ಠೆಯನ್ನು ಖರೀದಿಸಲು ಪ್ರಯತ್ನಿಸಿದ್ದಾರೆ. ಅಲ್ಲದೆ ಕಳೆದ ಏಪ್ರಿಲ್‌ನಲ್ಲಿ ಸಂಸತ್ತಿನಲ್ಲಿ ನಡೆದ ಅವಿಶ್ವಾಸ ಮತದಲ್ಲಿ ತಮ್ಮನ್ನು ಪದಚ್ಯುತಗೊಳಿಸುವ ಮೊದಲು ತಾವು ತೆಗೆದುಕೊಂಡ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ.

ಈಗ ಬಹಿರಂಗವಾದ ಆಡಿಯೋ ಮೂರನೆೇ ಆಡಿಯೋ ಆಗಿದ್ದು, ಈ ವಾರದ ಆರಂಭದಲ್ಲಿ ಎರಡು ಆಡಿಯೋಗಳು ಬಹಿರಂಗವಾಗಿದ್ದವು. ಅದರಲ್ಲಿ ಇಮ್ರಾನ್ ಖಾನ್ ಅವರು ಈ ವರ್ಷದ ಮಾರ್ಚ್‌ನಲ್ಲಿ ವಾಷಿಂಗ್ಟನ್‌ಗೆ ಪಾಕಿಸ್ತಾನದ ರಾಯಭಾರಿ ಕಳುಹಿಸಿದ್ದ ಸೈಫರ್ ಸಂದೇಶದ ಕುರಿತು ಮಾತನಾಡುತ್ತಿದ್ದಾರೆ. ಇದು "ಸೈಫರ್ ವಿವಾದ"ದ ಕೇಂದ್ರ ಬಿಂದುವಾಗಿತ್ತು.

ಈಗ ಬಿಡುಗಡೆಯಾಗಿರುವ ಕ್ರಿಕೆಟಿಗ-ರಾಜಕಾರಣಿ ಇಮ್ರಾನ್ ಖಾನ್ ಅವರ ಧ್ವನಿ ಎಂದು ನಂಬಲಾದ ಆಡಿಯೋದಲ್ಲಿ, "ಈಗ ನಂಬರ್ ಗೇಮ್ ಪೂರ್ಣಗೊಂಡಿದೆ ಎಂದು ನೀವು ತಪ್ಪು ತಿಳುವಳಿಕೆ ಹೊಂದಿದ್ದೀರಿ [...] ಎಲ್ಲಾ ಮುಗಿದಿದೆ ಎಂದು ಭಾವಿಸಬೇಡಿ". "ನೀವು ನೋಡ್ತಾ ಇರಿ, 48 ಗಂಟೆಗಳಲ್ಲಿ ದೊಡ್ಡ ವಿಚಾರಗಳು ನಡೆಯಲಿವೆ. ಅದನ್ನು ಸ್ವಂತ ನಾನೇ ಮಾಡುತ್ತಿದ್ದೇನೆ. ಆದರೆ ಇದನ್ನು ಬಹಿರಂಗವಾಗಿ ಹೇಳಲು ಸಾಧ್ಯವಿಲ್ಲ. ನಾನು ಐದು ಸಂಸದರನ್ನು ಖರೀದಿಸುತ್ತಿದ್ದೇನೆ" ಎಂದು ಖಾನ್ ಹೇಳಿದ್ದಾರೆ.

"ಆ ಐವರು ಬಹಳ ಮುಖ್ಯ ಎಂಬ ಸಂದೇಶವನ್ನು ನಾನು ನೀಡಿದ್ದೇನೆ. ಅವರು ಈ ಐದು [...] ಮತ್ತು ನಾನು 10 ಅನ್ನು ಭದ್ರಪಡಿಸಿದರೆ ಆಟ ನಮ್ಮ ಕೈಯಲ್ಲಿರುತ್ತದೆ ” ಎಂದು 69 ವರ್ಷದ ಖಾನ್ ಆಡಿಯೋದಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com