1 ತಿಂಗಳಿನಿಂದ ನಾಪತ್ತೆಯಾಗಿದ್ದ ವಿದೇಶಾಂಗ ಸಚಿವರ ವಜಾ, ಹೊಸ ಸಚಿವರ ನೇಮಕ

ಚೀನಾದಲ್ಲಿ ದೀರ್ಘಾವಧಿಯಿಂದ ನಡೆಯುತ್ತಿದ್ದ ವಿದೇಶಾಂಗ ಸಚಿವರಿಗೆ ಸಂಬಂಧಿಸಿದ ಹೈಡ್ರಾಮ ಇಂದಿಗೆ ಕೊನೆಯಾಗಿದ್ದು, ಹೊಸ ವಿದೇಶಾಂಗ ಸಚಿವರನ್ನು ಅಲ್ಲಿನ ಸರ್ಕಾರ ನೇಮಕ ಮಾಡಿದೆ. 
ಕಿನ್ ಗಂಗ್
ಕಿನ್ ಗಂಗ್

ಬೀಜಿಂಗ್: ಚೀನಾದಲ್ಲಿ ದೀರ್ಘಾವಧಿಯಿಂದ ನಡೆಯುತ್ತಿದ್ದ ವಿದೇಶಾಂಗ ಸಚಿವರಿಗೆ ಸಂಬಂಧಿಸಿದ ಹೈಡ್ರಾಮ ಇಂದಿಗೆ ಕೊನೆಯಾಗಿದ್ದು, ಹೊಸ ವಿದೇಶಾಂಗ ಸಚಿವರನ್ನು ಅಲ್ಲಿನ ಸರ್ಕಾರ ನೇಮಕ ಮಾಡಿದೆ. 

ಒಂದು ತಿಂಗಳಿನಿಂದ ನಾಪತ್ತೆಯಾಗಿದ್ದ ಚೀನಾದ ವಿದೇಶಾಂಗ ಸಚಿವ ಕಿನ್ ಗಂಗ್ ಅವರನ್ನು ವಜಾ ಮಾಡಲಾಗಿದ್ದು ಹಿರಿಯ ರಾಜತಾಂತ್ರಿಕ ಅಧಿಕಾರಿಯಾಗಿದ್ದ ವಾಂಗ್ ಯಿ ಅವರನ್ನು ಹೊಸ ವಿದೇಶಾಂಗ ಸಚಿವರನ್ನಾಗಿ ನೇಮಕ ಮಾಡಲಾಗಿದೆ.

ಚೀನಾದ ರಬ್ಬರ್ ಸ್ಟಾಂಪ್ ಪಾರ್ಲಿಮೆಂಟ್ ಹೊಸ ವಿದೇಶಾಂಗ ಸಚಿವರ ನೇಮಕವನ್ನು ಅನುಮೋದಿಸಿದೆ. ಕಳೆದ ಡಿಸೆಂಬರ್​ನಲ್ಲಿ ಕಿನ್ ಗಂಗ್ ಅವರನ್ನು ಎಲ್ಲಾ ಹಿರಿಯರನ್ನೂ ಮೀರಿ ವಿದೇಶಾಂಗ ಸಚಿವರಾಗಿ ನೇಮಕ ಮಾಡಲಾಗಿತ್ತು. ಈತನನ್ನು ಭವಿಷ್ಯದ ಚೀನಾದ ನಾಯಕ ಎಂದೇ ವಿಶ್ಲೇಷಿಸಲಾಗಿತ್ತು. 

ಚೀನಾದ ಇತಿಹಾಸದಲ್ಲೇ ಕಿನ್ ಗಂಗ್ ಅತ್ಯಂತ ಕಿರಿಯ ಸಚಿವರೆಂಬ ಹೆಗ್ಗಳಿಕೆ ಹೊಂದಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com