ಅಮೆರಿಕಾ: ನ್ಯಾಶ್ವಿಲ್ಲೆ ಶಾಲೆಯಲ್ಲಿ ಮಹಿಳಾ ಶೂಟರ್ ನಿಂದ ಮೂವರು ಮಕ್ಕಳು, ಮೂವರು ವಯಸ್ಕರ ಹತ್ಯೆ

ಅಮೆರಿಕದ ನ್ಯಾಶ್ವಿಲ್ಲೆಯ ಖಾಸಗಿ ಕ್ರಿಶ್ಚಿಯನ್ ಶಾಲೆಯಲ್ಲಿ ಸೋಮವಾರ ಮಹಿಳಾ ಸೂಟರ್ ಒಬ್ಬರು ಪೈಶಾಚಿಕ ಕೃತ್ಯವೆಸಗಿದ್ದಾರೆ. 
ಗುಂಡಿನ ದಾಳಿ ನಡೆದ ನ್ಯಾಶ್ವಿಲೆಯ ಶಾಲೆ ಬಳಿ ಭದ್ರತಾ ಅಧಿಕಾರಿಗಳ ಚಿತ್ರ
ಗುಂಡಿನ ದಾಳಿ ನಡೆದ ನ್ಯಾಶ್ವಿಲೆಯ ಶಾಲೆ ಬಳಿ ಭದ್ರತಾ ಅಧಿಕಾರಿಗಳ ಚಿತ್ರ

ನ್ಯಾಶ್ವಿಲ್ಲೆ: ಅಮೆರಿಕದ ನ್ಯಾಶ್ವಿಲ್ಲೆಯ ಖಾಸಗಿ ಕ್ರಿಶ್ಚಿಯನ್ ಶಾಲೆಯಲ್ಲಿ ಸೋಮವಾರ ಮಹಿಳಾ ಸೂಟರ್ ಒಬ್ಬರು ಪೈಶಾಚಿಕ ಕೃತ್ಯವೆಸಗಿದ್ದಾರೆ. ಎರಡು ರೈಫಲ್ ಮತ್ತು ಒಂದು ಪಿಸ್ತೂಲ್ ನಿಂದ ಮೂವರು ವಿದ್ಯಾರ್ಥಿಗಳು ಹಾಗೂ ಮೂವರು ವಯಸ್ಕರನ್ನು ಹತ್ಯೆ ಮಾಡಿದ್ದಾರೆ. ಶಾಲೆಗಳಲ್ಲಿ ರಕ್ತಪಾತದಂತಹ ಘಟನೆಗಳಿಂದ ಹೆಚ್ಚು ಆತಂಕಕ್ಕೊಳಗಾಗುತ್ತಿರುವ ದೇಶದಲ್ಲಿ ಇದು ಇತ್ತೀಚಿನ ಸಾಮೂಹಿಕ ಗುಂಡಿನ ದಾಳಿಯಾಗಿದೆ. 

ಪ್ರಿಸ್ಕೂಲ್‌ನಿಂದ ಆರನೇ ತರಗತಿಯವರೆಗಿನ ಸುಮಾರು 200 ವಿದ್ಯಾರ್ಥಿಗಳಿದ್ದ ಪ್ರೆಸ್‌ಬಿಟೇರಿಯನ್ ಶಾಲೆಯಾದ ದಿ ಕವೆನೆಂಟ್ ಸ್ಕೂಲ್‌ನಲ್ಲಿ ಈ ಹಿಂಸಾಚಾರ ನಡೆದಿದೆ. ನಂತರ ಪೊಲೀಸರು ಸಹ ಗುಂಡು ಹಾರಿಸಿದ್ದು, ಹಂತಕಿ ಕೂಡಾ ಸಾವನ್ನಪ್ಪಿದ್ದಾಳೆ. ಶೂಟರ್ ನ್ಯಾಶ್‌ವಿಲ್ಲೆಯ 28 ವರ್ಷದ ಮಹಿಳೆ ಎಂದು ಪೊಲೀಸರು ತಿಳಿಸಿದ್ದಾರೆ. ಆಕೆಗೆ ಶಾಲೆಗೆ ಸಂಪರ್ಕವಿದೆಯೇ ಎಂಬುದನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ  ಅಧಿಕಾರಿಗಳು ನಿರತರಾಗಿದ್ದಾರೆ.

ಕಳೆದ ವರ್ಷ ಟೆಕ್ಸಾಸ್‌ನ ಉವಾಲ್ಡೆಯಲ್ಲಿನ ಪ್ರಾಥಮಿಕ ಶಾಲೆಯಲ್ಲಿ ಹತ್ಯಾಕಾಂಡ ಸೇರಿದಂತೆ ಶಾಲಾ ಹಿಂಸಾಚಾರದಿಂದ ಅಮೆರಿಕ ದೇಶಾದ್ಯಂತ ವಿವಿಧ ಸಮುದಾಯಗಳು ತತ್ತರಿಸುತ್ತಿರುವಾಗ ಈ ಹತ್ಯೆಗಳು ಮರುಕಳಿಸುತ್ತಿವೆ. ವರ್ಜೀನಿಯಾದಲ್ಲಿ ವಿದ್ಯಾರ್ಥಿಯೊಬ್ಬ ತನ್ನ ಶಿಕ್ಷಕಿ ಮೇಲೆ ಗುಂಡು ಹಾರಿಸಿದ್ದ. ಕಳೆದ ವಾರ ಡೆನ್ವಾರ್ ನಲ್ಲಿ ಗುಂಡಿನ ದಾಳಿಯಿಂದ ಇಬ್ಬರು ಆಡಳಿತಾಧಿಕಾರಿಗಳು ಗಾಯಗೊಂಡಿದ್ದರು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com