ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತ: AC ಕಂಪ್ರೆಸರ್ ಸ್ಫೋಟಕ್ಕೆ 15 ನವಜಾತ ಶಿಶುಗಳು ಸಜೀವ ದಹನ

ಸರ್ಕಾರಿ ಆಸ್ಪತ್ರೆಯೊಂದರಲ್ಲಿ AC ಕಂಪ್ರೆಸರ್ ಸ್ಫೋಟಗೊಂಡು ಸಂಭವಿಸಿದ ಭೀಕರ ಜ್ವಾಲೆಯಲ್ಲಿ 15 ನವಜಾತ ಶಿಶುಗಳು ಜೀವಂತ ದಹನವಾಗಿವೆ. ಇಸ್ಲಾಮಾಬಾದ್‌ನ ಪ್ರಮುಖ ಆಸ್ಪತ್ರೆಯಾದ ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ತಾಯಿ ಮತ್ತು ಮಗುವಿನ ಆರೋಗ್ಯ ವಿಭಾಗದ ಮೂರನೇ ಮಹಡಿಯಲ್ಲಿ ಈ ಘಟನೆ ನಡೆದಿದೆ.
Pakistan Hospital Fire: Tragedy at Islamabad PIMS as 15 Newborns Die in Nursery Blaze
ಆಸ್ಪತ್ರೆಯಲ್ಲಿ ಭೀಕರ ಅಗ್ನಿ ದುರಂತOnline Desk
Updated on

ಇಸ್ಲಾಮಾಬಾದ್‌ (ಪಾಕಿಸ್ತಾನ): ಪಾಕಿಸ್ತಾನದ ರಾಜಧಾನಿ ಇಸ್ಲಾಮಾಬಾದ್‌ನ ಸರ್ಕಾರಿ ಆಸ್ಪತ್ರೆಯೊಂದರಲ್ಲಿ AC ಕಂಪ್ರೆಸರ್ ಸ್ಫೋಟಗೊಂಡು ಸಂಭವಿಸಿದ ಭೀಕರ ಜ್ವಾಲೆಯಲ್ಲಿ 15 ನವಜಾತ ಶಿಶುಗಳು ಜೀವಂತ ದಹನವಾಗಿವೆ. ಇಸ್ಲಾಮಾಬಾದ್‌ನ ಪ್ರಮುಖ ಆಸ್ಪತ್ರೆಯಾದ ಪಾಕಿಸ್ತಾನ ವೈದ್ಯಕೀಯ ವಿಜ್ಞಾನ ಸಂಸ್ಥೆಯ ತಾಯಿ ಮತ್ತು ಮಗುವಿನ ಆರೋಗ್ಯ ವಿಭಾಗದ ಮೂರನೇ ಮಹಡಿಯಲ್ಲಿ ಈ ಘಟನೆ ನಡೆದಿದ್ದು, ಆ ಕುರಿತ ವರದಿ ಇಲ್ಲಿದೆ:

ಘಟನೆ ನಡೆದಿದ್ದು ಹೇಗೆ?

ಬುಧವಾರ ಬೆಳಗ್ಗೆ ಸುಮಾರು 6:45 ರಿಂದ 7:00 ಗಂಟೆಯ ಅವಧಿಯಲ್ಲಿ ಆಸ್ಪತ್ರೆಯ ನವಜಾತ ಶಿಶುಗಳ ನರ್ಸರಿ ವಾರ್ಡ್‌ನಲ್ಲಿ ಅಳವಡಿಸಲಾಗಿದ್ದ ಹವಾನಿಯಂತ್ರಣ (AC) ಕಂಪ್ರೆಸರ್ ಏಕಾಏಕಿ ಸ್ಫೋಟಗೊಂಡಿದೆ. ಈ  ಸ್ಫೋಟದ ತೀವ್ರತೆಗೆ ಇಡೀ ವಾರ್ಡ್‌ನಲ್ಲಿ ದಟ್ಟವಾದ ಹೊಗೆ ಮತ್ತು ಜ್ವಾಲೆ ಆವರಿಸಿಕೊಂಡಿತು. ಇನ್ನು, ಘಟನೆಗೆ ಹಳೆಯ ವಿದ್ಯುತ್ ವ್ಯವಸ್ಥೆಯಲ್ಲಾದ ಶಾರ್ಟ್ ಸರ್ಕ್ಯೂಟ್ ಅಥವಾ ತಾಂತ್ರಿಕ ದೋಷವೇ ಪ್ರಮುಖ ಕಾರಣ ಎನ್ನಲಾಗಿದೆ. ಇನ್ನು, ಘಟನೆ ಸಂಭವಿಸಿದ ಸಮಯದಲ್ಲಿ ಆ ನರ್ಸರಿ ವಾರ್ಡ್‌ನಲ್ಲಿ ಒಟ್ಟು 16 ನವಜಾತ ಶಿಶುಗಳನ್ನು ಇರಿಸಲಾಗಿತ್ತು. ಏತನ್ಮಧ್ಯೆ, ಬೆಂಕಿ ವೇಗವಾಗಿ ಹರಡಿದ ಕಾರಣ ಅಲ್ಲಿ ಕರ್ತವ್ಯದಲ್ಲಿದ್ದ ಲೇಡಿ ಡಾಕ್ಟರ್ ಕೇವಲ ಒಂದು ಮಗುವನ್ನು ಮಾತ್ರ ಸುರಕ್ಷಿತವಾಗಿ ಹೊರಗೆ ತರಲು ಯಶಸ್ವಿಯಾದರು. ಅದರಂತೆ, ಉಳಿದ 15 ಶಿಶುಗಳು ಬೆಂಕಿಯ ಜ್ವಾಲೆಗೆ ಸಿಲುಕಿ ಸ್ಥಳದಲ್ಲೇ ಸಾವನ್ನಪ್ಪಿವೆ. ಇದರಲ್ಲಿ 14 ಮಕ್ಕಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ.

ಇನ್ನು, ಸ್ಥಳಕ್ಕೆ ತಕ್ಷಣವೇ ಧಾವಿಸಿದ 6 ಅಗ್ನಿಶಾಮಕ ವಾಹನಗಳು ಮತ್ತು 4 ಆಂಬ್ಯುಲೆನ್ಸ್‌ಗಳು ಸುದೀರ್ಘ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದವು. ಜೊತೆಗೆ, ವಾರ್ಡ್‌ನ ಕಿಟಕಿ ಗಾಜುಗಳನ್ನು ಒಡೆದು ಒಳಗೆ ನುಗ್ಗಿದ ರಕ್ಷಣಾ ಸಿಬ್ಬಂದಿ ಕಾರ್ಯಾಚರಣೆ ಮುಗಿಸಿ ಸದ್ಯ ಕೂಲಿಂಗ್ ಪ್ರಕ್ರಿಯೆ ನಡೆಸುತ್ತಿದ್ದಾರೆ. ಮುಂದುವರೆದು, ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್ ಈ ದುರಂತಕ್ಕೆ ತೀವ್ರ ಸಂತಾಪ ಮತ್ತು ಆಘಾತ ವ್ಯಕ್ತಪಡಿಸಿದ್ದು, ತಕ್ಷಣವೇ ತನಿಖೆ ನಡೆಸಿ ವರದಿ ನೀಡುವಂತೆ ಆದೇಶಿಸಿದ್ದಾರೆ. ಅದರಂತೆ, ಘಟನೆಯ ಸಂಪೂರ್ಣ ತನಿಖೆಗಾಗಿ ಹೆಚ್ಚುವರಿ ಡೆಪ್ಯುಟಿ ಕಮಿಷನರ್ ನೇತೃತ್ವದಲ್ಲಿ ಉನ್ನತ ಮಟ್ಟದ ವಿಚಾರಣಾ ಸಮಿತಿಯನ್ನು ರಚಿಸಲಾಗಿದೆ.

Pakistan Hospital Fire: Tragedy at Islamabad PIMS as 15 Newborns Die in Nursery Blaze
ಮೊಜ್ತಾಬಾ ಖಮೇನಿ ಜೀವಂತವಾಗಿ ಇದ್ದಾರೋ ಇಲ್ಲವೋ? ಆತಂಕದ ಹಳೆಯ Video ಬಿಡುಗಡೆ ಮಾಡಿದ ಇರಾನ್!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com